ಕರ್ನಾಟಕ

karnataka

ರಾಹುಲ್ ಗಾಂಧಿ

ETV Bharat / videos

Rahul Gandhi: ಕೇರಳದ ಕೊಟ್ಟಕಲ್‌ನ ವಿಶ್ವಂಭರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ರಾಹುಲ್ ಗಾಂಧಿ - Rahul Gandhi offered prayers at Sri Viswambhara

By

Published : Jul 27, 2023, 9:06 AM IST

ಮಲಪ್ಪುರಂ (ಕೇರಳ) :ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳಕ್ಕೆ ಭೇಟಿ ನೀಡಿದ್ದು, ಇಲ್ಲಿನ ಕೊಟ್ಟಕಲ್‌ನಲ್ಲಿರುವ ವಿಶ್ವಂಭರ ದೇವಸ್ಥಾನದಲ್ಲಿ ಬುಧವಾರ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆರ್ಯ ವೈದ್ಯ ಸಾಲಾದಲ್ಲಿನ ಪಿಎಸ್‌ವಿ ನಾಟ್ಯಸಂಘಮ್‌ನಲ್ಲಿ ರಾಜ್ಯದ ಸಾಂಪ್ರದಾಯಿಕ ನೃತ್ಯ ಪ್ರಕಾರ ಕಥಕ್ಕಳಿ ಪ್ರದರ್ಶನ ವೀಕ್ಷಿಸಿದರು.

ಇದನ್ನೂ ಓದಿ : ಮಾನಹಾನಿ ಕೇಸ್ ​: ಜುಲೈ 21 ಕ್ಕೆ ರಾಹುಲ್​ ಗಾಂಧಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್​

ಇದಕ್ಕೂ ಮುನ್ನ ಕೊಟ್ಟಕಲ್‌ನಲ್ಲಿ ಆಧುನಿಕ ಮಲಯಾಳಂ ಸಾಹಿತ್ಯದ ದಂತಕಥೆ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದರು. ನಾಯರ್ ಅವರಿಗೆ ಪೆನ್ನು ಉಡುಗೊರೆ ನೀಡಿದರು.  

ಕೇರಳದ ವಯನಾಡ್ ಜಿಲ್ಲೆಯ ಮಾಜಿ ಸಂಸದರಾದ ರಾಹುಲ್​ ಗಾಂಧಿ 'ಮೋದಿ' ಉಪನಾಮ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ, ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಅವರನ್ನು ಸಂಸತ್ತಿನ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. 

ಇದನ್ನೂ ಓದಿ :ಮಾನನಷ್ಟ ಮೊಕದ್ದಮೆ : ರಾಹುಲ್ ಮೇಲ್ಮನವಿ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಗುಜರಾತ್ ಸರ್ಕಾರ, ಪೂರ್ಣೇಶ್ ಮೋದಿಗೆ ಸುಪ್ರೀಂ ಸೂಚನೆ

ABOUT THE AUTHOR

...view details