ಹಂಪಿ ಉತ್ಸವ: ರಂಗೇರಿಸಿದ ರಘು ದೀಕ್ಷಿತ್, ಅರ್ಮಾನ್ ಮಲ್ಲಿಕ್ ಸಂಗೀತ ಸಂಜೆ - ETV Bharat kannada News
ವಿಜಯನಗರ :ಹಂಪಿ ಉತ್ಸವದ 2ನೇ ದಿನವಾದ ಶನಿವಾರ ರಾತ್ರಿ ಮೈನಡುಗುವ ಚಳಿಯಲ್ಲಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಸಂಗೀತದ ರಸದೌತಣ ನಡೆಯಿತು. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಮತ್ತು ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಅವರು ನೀಡಿದ ಸಂಗೀತ ಪ್ರೇಕ್ಷಕರನ್ನು ಮುದಗೊಳಿಸಿತು. ಫ್ಯೂಶನ್‌ನಲ್ಲಿ ರಘು ದೀಕ್ಷಿತ್ ಅವರು ಕನ್ನಡದ ಜಾನಪದ ಹಾಗೂ ಸಿನಿಮಾ ಗೀತೆಗಳನ್ನು ಹಾಡಿದರು. ‘ಕೋಡಗನ ಕೋಳಿ ನುಂಗಿತ್ತಾ, ಲೋಕದ ಚಿಂತಿ, ಗುಡುಗುಡಿಯಾ ಸೇದಿ ನೋಡೋ, ನೀನೇ ಬೇಕು.. ಮುಂತಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅರ್ಮಾನ್ ಮಲ್ಲಿಕ್ ಅವರು ತಮ್ಮದೇ ಹಾಡುಗಳು ಮತ್ತು ಇತರ ಜನಪ್ರಿಯ ಬಾಲಿವುಡ್ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮುದಗೊಳಿಸಿದರು.
ಇದನ್ನೂ ಓದಿ :ಹಂಪಿ ಉತ್ಸವಕ್ಕೆ ಬೊಮ್ಮಾಯಿ ಚಾಲನೆ.. ಖ್ಯಾತ ಗಾಯಕರಿಂದ ಸಂಗೀತ ರಸಮಂಜರಿ