ಗ್ರಾಮ ವಾಸ್ತವ್ಯ: ಆರ್ ಅಶೋಕ್, ಶಾಸಕ ಸಿ ಟಿ ರವಿ ಭರ್ಜರಿ ಕುಣಿತ.. - etv bharat karnataka
ಚಿಕ್ಕಮಗಳೂರು:ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ 16ನೇ ಗ್ರಾಮ ವಾಸ್ತವ್ಯವನ್ನು ಮಾಡಿದರು. ಗ್ರಾಮಕ್ಕೆ ಆಗಮಿಸಿದ ಸಚಿವ ಅಶೋಕ್ಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತವನ್ನು ಕೋರಿದರು. ಗ್ರಾಮ ವ್ಯಾಸ್ತವ್ಯಕ್ಕೂ ಮುನ್ನ ಸಚಿವ ಆರ್ ಅಶೋಕ್ ಹಾಗೂ ಶಾಸಕ ಸಿ ಟಿ ರವಿ ಎತ್ತಿನಗಾಡಿಯಲ್ಲಿ ಮೂರು ಕಿ.ಮೀ. ರೋಡ್ ಶೋ ನಡೆಸಿದರು. ಪಿಳ್ಳೇನಹಳ್ಳಿ ಗ್ರಾಮದಿಂದ ಹುಲಿಕೆರೆ ಗ್ರಾಮದವರೆಗೂ ಮೂರು ಕಿ.ಮೀ. ವರೆಗೆ ಅಲಂಕಾರಗೊಂಡ ಎತ್ತಿನಗಾಡಿ ಮೆರವಣಿಗೆಯಲ್ಲಿ ಕಂದಾಯ ಸಚಿವರನ್ನು ಕರೆತರಲಾಯಿತು. ಗ್ರಾಮ ವಾಸ್ತವ್ಯದ ಅಡಿಯಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮ ನಡೆಸಲಾಯಿತು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಚಿವ ಆರ್ ಅಶೋಕ್, ಶಾಸಕ ಸಿ ಟಿ ರವಿ ಹಾಗೂ ಬಿಜೆಪಿ ಕಾರ್ಯಕರ್ತರು ವೇದಿಕೆ ಮೇಲೆ ಸತ್ಯಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ.. ಮತದಲ್ಲಿ ಮೇಲ್ಯಾವುದೋ.. ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.
ಇದನ್ನೂ ಓದಿ:7ನೇ ರಾಜ್ಯ ವೇತನ ಆಯೋಗದಿಂದ ಪ್ರಶ್ನಾವಳಿ ಬಿಡುಗಡೆ: ಸಲಹೆ, ಅಭಿಪ್ರಾಯ ಆಹ್ವಾನ