ಮಂಡ್ಯ : ಕುರಿಮರಿ ನುಂಗಲು ಯತ್ನಿಸಿದ ಬೃಹತ್ ಗಾತ್ರದ ಹೆಬ್ಬಾವು ಸೆರೆ - ಈಟಿವಿ ಭಾರತ ಕನ್ನಡ
ಮಂಡ್ಯ: ಮೇಯುತ್ತಿದ್ದ ಕುರಿ ಮರಿಯನ್ನು ನುಂಗಲು ಯತ್ನಿಸಿದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದ ಶಿವಪುರದಲ್ಲಿ ಎಂಬಲ್ಲಿ ನಡೆದಿದೆ. ಇಲ್ಲಿನ ಶಿಂಷಾ ನದಿ ಸಮೀಪ ಚಾಮನಹಳ್ಳಿ ಗ್ರಾಮದ ತಗಡಯ್ಯ ಎಂಬುವವರು ತಮ್ಮ 20ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಹೆಬ್ಬಾವು ಕುರಿಮರಿ ಮೇಲೆ ದಾಳಿ ನಡೆಸಿದೆ. ಈ ಹೆಬ್ಬಾವು ಕುರಿಮರಿಯನ್ನು ನುಂಗಲು ಯತ್ನಿಸಿದ್ದು, ಇದನ್ನು ಕಂಡ ಮಾಲೀಕ ತಗಡಯ್ಯ ಕುರಿ ಮರಿಯ ಪ್ರಾಣ ಉಳಿಸಲು ಜೋರಾಗಿ ಬೊಬ್ಬಿಟ್ಟಿದ್ದಾನೆ. ಈ ವೇಳೆ ಬೆದರಿದ ಹೆಬ್ಬಾವು ಅಲ್ಲಿಯೇ ಇದ್ದ ಬೇಲಿ ಬದಿ ಅವಿತುಕೊಂಡಿದೆ.
ಬಳಿಕ ತಗಡಯ್ಯ ಕೂಡಲೇ ಉರಗ ತಜ್ಞ ಚಾಮನಹಳ್ಳಿ ರವಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ರವಿ ಸುಮಾರು 14 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿದು ಶಿಂಷಾ ನದಿ ದಡದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಹೆಬ್ಬಾವು ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಇದನ್ನೂ ಓದಿ :ಸ್ಕೂಟಿಯೊಳಗೆ ಬೃಹತ್ ಹೆಬ್ಬಾವು ಪತ್ತೆ.. ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ!