ವಿಡಿಯೋ: ಹಳೇ ಮೋಟಾರ್ ಸೈಕಲ್ನ ಬಿಡಿಭಾಗ ಬಳಸಿ ವಿಭಿನ್ನ ಸೈಕಲ್ ಉತ್ಪಾದಿಸಿದ ಯುವಕ
ಸಂಗ್ರೂರ್ (ಪಂಜಾಬ್): ಪಂಜಾಬ್ ಯುವಜನತೆಯಲ್ಲಿ ಕೌಶಲ್ಯಕ್ಕಿಲ್ಲ ಕೊರತೆ. ಆಗಾಗ್ಗೆ ತಮ್ಮ ಸಾಮರ್ಥ್ಯ ಹೊರ ಹಾಕುತ್ತಿರುತ್ತಾರೆ. ಆದರೆ ಹೊಸತನ್ನು ಸೃಷ್ಟಿಸಲು ಸರ್ಕಾರದ ಹೆಚ್ಚಿನ ನೆರವು ಬೇಕಿದೆ. ಸಂಗ್ರೂರ್ ಜಿಲ್ಲೆಯ ಮಹಲನ್ ಗ್ರಾಮದ ಯುವಕ ಬಿಕ್ರಮ್ ಸಿಂಗ್ ಅವರು ವಿಭಿನ್ನ ಸೈಕಲ್ ಉತ್ಪಾದಿಸಿ ಗಮನ ಸೆಳೆದಿದ್ದಾರೆ.
ವಿಭಿನ್ನವಾಗಿ ಏನಾದರೂ ಸಾಧಿಸಬೇಕೆಂದುಕೊಂಡ ಯುವಕ ಬಿಕ್ರಮ್ ಸಿಂಗ್ ಅವರು ತಮ್ಮ ಮೆದುಳಿಗೆ ಕೆಲಸ ಕೊಟ್ಟರು. ಬಳಿಕ ಹಳೇ ಮೋಟಾರ್ ಸೈಕಲ್ನ ಬಿಡಿಭಾಗ, ಸುಲಭವಾಗಿ ಸಿಗುವ ಕಚ್ಛಾವಸ್ತು (ಬಿದಿರು, ಪೈಂಟ್ ಇತ್ಯಾದಿ) ಬಳಸಿ ವಿಭಿನ್ನ ಸೈಕಲ್ ಮಾಡಲು ಮುಂದಾದರು. ಮೊದಲ ಸೈಕಲ್ನ ಬ್ಲ್ಯೂ ಪ್ರಿಂಟ್ ಮಾಡಿಕೊಂಡರು. ನಂತರ ತಮ್ಮಲ್ಲಿರುವ ಮೆಟೀರಿಯಲ್ಗಳನ್ನು ಬಳಸಿಕೊಂಡು ಸೈಕಲ್ ಸಿದ್ಧಪಡಿಸಿದರು. ಇದು ಎಷ್ಟು ವಿಶಿಷ್ಟವಾಗಿದೆ ಎಂದರೆ ನೀವು ಇಂತಹ ಸೈಕಲ್ ಅನ್ನು ಈ ಮೊದಲು ನೋಡಿರಕ್ಕಿಲ್ಲ. ಸರ್ಕಾರ ಇಂತಹ ಪ್ರತಿಭಾನ್ವಿತರ ಕೈ ಹಿಡಿದರೆ ಹೆಚ್ಚಿನ ಬದಲಾವಣೆ ಸಾಧ್ಯ.
ನನ್ನ ಮನೆ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೇವೆ. ಹಾಗಾಗಿ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಸರ್ಕಾರದಿಂದ ಅಥವಾ ಯಾರಿಂದಲಾದರೂ ಬೆಂಬಲ ಸಿಕ್ಕರೆ ನಾನು ಹೆಚ್ಚಿನದ್ದನ್ನು, ಹೊಸತನದಿಂದ ಕೂಡಿದ ಏನನ್ನಾದರು ಮಾಡಿ ತೋರಿಸಬಹುದು. ಯಾರಾದರು ನನ್ನನ್ನು ಬೆಂಬಲಿಸಿದರೆ ಪಂಜಾಬ್ ಮತ್ತು ದೇಶದ ಕೀರ್ತಿ ಹೆಚ್ಚಿಸುವಂತಹ ಕೆಲಸ ಮಾಡುತ್ತೇನೆ ಎಂದು ಯುವಕ ಬಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ತಮನ್ನಾಗಾಗಿ ಭದ್ರತೆ ಭೇದಿಸಿ ಬಂದ ಫ್ಯಾನ್...ನಾಜೂಕಾಗಿ ಪ್ರತಿಕ್ರಿಯಿಸಿದ ಸೌತ್ ಸ್ಟಾರ್ ನಟಿ