‘ಇದರಲ್ಲಿ ನನ್ನ ಕೈವಾಡವಿಲ್ಲ’... ಸಿಧು ಮುಸೇವಾಲಾ ಹತ್ಯೆಗೆ ಸಂಬಂಧಿಸಿದಂತೆ ಪಂಜಾಬಿ ಗಾಯಕ ಸ್ಪಷ್ಟನೆ - ಸಿಧು ಮುಸೇವಾಲಾ ಕೊಲೆ ಪ್ರಕರಣ
ಚಂಡೀಗಢ: ಫತೇಹಾಬಾದ್‌ನ ಬಹಬಲ್‌ಪುರ ಗ್ರಾಮದ ನಿವಾಸಿ ಪಂಜಾಬಿ ಗಾಯಕ ಮಂಕಿರತ್ ಔಲಾಖ್ ಅವರು ಸಿಧು ಮುಸೇವಾಲಾ ಹತ್ಯೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಸಿಧು ಮುಸೇವಾಲಾ ಸಾವಿನ ಬಗ್ಗೆ ಮಂಕಿರತ್ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಲ್ಲಿ ನನ್ನ ಅಥವಾ ನನ್ನ ಮ್ಯಾನೇಜರ್ ಕೈವಾಡವಿಲ್ಲ. ಸಿದ್ದು ಮುಸೇವಾಲ ಕುಟುಂಬ ಸದಸ್ಯರಿಗೆ ಹಾಗೂ ಅವರ ಬೆಂಬಲಿಗರಿಗೆ ಆದ ನೋವು ನನಗೂ ಆಗಿದೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಮಂಕಿರತ್ ಮನವಿ ಮಾಡಿದ್ದಾರೆ.
Last Updated : Feb 3, 2023, 8:23 PM IST