ಸಟ್ಲೆಜ್ ನದಿ ಪ್ರವಾಹದಿಂದ ರಸ್ತೆ ಸಂಪರ್ಕ ಕಳೆದುಕೊಂಡ ವಿವಿಧ ಗ್ರಾಮಗಳು..
ಶ್ರೀ ಆನಂದಪುರ ಸಾಹಿಬ್ (ಪಂಜಾಬ್):ಶ್ರೀ ಆನಂದಪುರ ಸಾಹಿಬ್ ಕ್ಷೇತ್ರವು ಪ್ರವಾಹಕ್ಕೆ ತತ್ತರಿಸಿ ಹೋಗಿವೆ. ಅಬ್ಬರ ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ಶ್ರೀ ಆನಂದಪುರ ಸಾಹಿಬ್ ಸಮೀಪದ ಮೆಹದ್ಲಿ ಕಾಲನ್ ಸೇರಿದಂತೆ ವಿವಿಧ ಗ್ರಾಮಗಳ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.
ನಿನ್ನೆಯೂ ಸಟ್ಲೆಜ್ ನದಿಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ವಿವಿಧ ಗ್ರಾಮಗಳ ಮನೆ ಹಾಗೂ ಹೊಲಗಳಿಗೆ ನೀರು ನುಗ್ಗಿದೆ. ಐದರಿಂದ ಏಳು ಅಡಿಗಳವರೆಗೆ ಜಲಾವೃತವಾಗಿರುವುದು ಕಂಡು ಬಂದಿದೆ. ಇಂದು, ಪರಿಸ್ಥಿತಿ ಸ್ವಲ್ಪಮಟ್ಟಿಗೆ ಕೊಂಚ ಸುಧಾರಿಸಿದೆ. ಆದರೆ, ಅಪಾಯ ಮಾತ್ರ ಹಾಗೆ ಉಳಿದಿದೆ. ಮಳೆಯ ಆರಂಭದ ದಿನಗಳಲ್ಲೇ ಪ್ರವಾಹದ ಪರಿಸ್ಥತಿ ನಿರ್ಮಾಣವಾಗಿದೆ. ಹಿಮಾಚಲದ ಮೇಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಬೆನ್ನಲ್ಲೆ ಪಂಜಾಬ್ ರಾಜ್ಯದ ವಿವಿಧ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ.
''ಕೇವಲ ಊಟ ಕೊಡಲು ಮಾತ್ರ ಗ್ರಾಮಗಳಿಗೆ ಅಧಿಕಾರಿಗಳು ಬರುತ್ತಿದ್ದಾರೆ. ಮನೆಗಳನ್ನು ಖಾಲಿ ಮಾಡಲು ಹೇಳಲಾಗುತ್ತದೆ. ಆದರೆ, ಜನರು ಎಲ್ಲಿಗೆ ಹೋಗಬೇಕೆಂದು ತಿಳಿಸುತ್ತಿಲ್ಲ. ಗ್ರಾಮಕ್ಕೆ ನೀರು ಬರಲು ನದಿಯ ಒಡಲು ಕಾರಣ. ಆದರೆ, ಮೊದಲಿಗಿಂತಲೂ ಸದ್ಯ ನೀರು ಪ್ರಮಾಣ ಇಳಿಕೆ ಕಂಡಿದೆ. ಜಲಾವೃತವಾಗಿರುವುದರಿಂದ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತಿದೆ ಎಂದು ಎನ್ನುತ್ತಾರೆ ಗ್ರಾಮಸ್ಥರು. ''ಆಸ್ಪತ್ರೆಗೆ ಹೋಗಲು ಕೂಡ ದಾರಿ ಇಲ್ಲದಂತಾಗಿದೆ. ಗ್ರಾಮಗಳ ಸುತ್ತಲೂ ಜಲಾವೃತವಾಗಿದೆ. ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಸಮಸ್ಯೆ ಹೆಚ್ಚಾಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ:ಧಾರಾಕಾರ ಮಳೆಗೆ ಅಪಾಯದ ಮಟ್ಟ ತಲುಪಿದ ಡ್ಯಾಂ: ಮತ್ತೆ ಜಲಾವೃತಗೊಂಡ ಪಂಜಾಬ್.. ಡ್ರೋನ್ ವಿಡಿಯೋ