ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಯುವಕ: ಮೂವರು ಪೊಲೀಸ್ ಪೇದೆಗಳ ಅಮಾನತು - ಪುಣೆ ಕಾಲೇಜ್ ಯುವತಿ ಹಲ್ಲೆ
ಪುಣೆ (ಮಹಾರಾಷ್ಟ್ರ): ಎರಡು ದಿನಗಳ ಹಿಂದೆ ಪುಣೆಯ ಸದಾಶಿವ ಪೇಠದಲ್ಲಿ ಹಾಡುಹಗಲೇ ಯುವಕನೊಬ್ಬ ಬಾಲಕಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಈ ವೇಳೆ, ಆ ಪ್ರದೇಶದಲ್ಲಿನ ಪೊಲೀಸರಿಗೆ ವಿಷಯ ತಿಳಿಸಿದರೂ ಬಾರದೇ ಇದ್ದಕ್ಕೆ ಕರ್ತವ್ಯ ಲೋಪದಡಿ ಮೂವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.
ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳ ಹುಟ್ಟಿವೆ. ವಿಶ್ರಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುಗೇಟ್ ಔಟ್‌ಪೋಸ್ಟ್‌ನ ಪೊಲೀಸ್ ಪೇದೆ ಸೇರಿದಂತೆ ಮೂವರು ನೌಕರರನ್ನು ಅಮಾನತುಗೊಳಿಸಲಾಗಿದೆ. ಮೂವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸ್ ಪೇದೆ ಸುನೀಲ್ ಶಾಂತಾರಾಮ್ ತಾಠೆ, ಪ್ರಶಾಂತ್ ಪ್ರಕಾಶ್ ಜಗದಾಳೆ ಮತ್ತು ಸಾಗರ್ ನಾಮ್‌ದೇವ್ ರಾಣೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಯುವತಿ ಪ್ರೀತಿ ನಿರಾಕರಿಸಿದ್ದರಿಂದ ಕೋಪಗೊಂಡ ಯುವಕ ಯುವತಿಯನ್ನು ಹಿಂಬಾಲಿಸಿ ಮಚ್ಚಿನಿಂದ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯಲ್ಲಿ ಪ್ರೀತಿ ರಾಮಚಂದ್ರ ಫಾಟಕ್ ಗಾಯಗೊಂಡು ಆಸ್ಪತ್ರಗೆ ದಾಖಲಾಗಿದ್ದರು.
ಇದನ್ನೂ ಓದಿ: Bengaluru crime: ಯುವತಿಯ ವಿಚಾರಕ್ಕೆ ಕಿರಿಕ್.. ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ, 7 ಜನರ ಬಂಧನ