ಕರ್ನಾಟಕ

karnataka

ಕೈಕೊಟ್ಟ ಮಳೆರಾಯ: ವರುಣನ ಕೃಪೆಗಾಗಿ ವಿಶೇಷ ಪೂಜೆ‌‌ ಸಲ್ಲಿಸಿ ಮೋಡದತ್ತ ಕಂಬಳಿ ಬೀಸಿದ ರೈತರು...

ETV Bharat / videos

ಕೈಕೊಟ್ಟ ಮಳೆರಾಯ: ವರುಣ ಕೃಪೆಗಾಗಿ ಪೂಜೆ‌‌ ಸಲ್ಲಿಸಿ ಮೋಡದತ್ತ ಕಂಬಳಿ ಬೀಸಿದ ರೈತರು - ವಿಶೇಷ ಪೂಜೆ‌‌ ಸಲ್ಲಿಸಿ ಮೋಡದತ್ತ ಕಂಬಳಿ ಬೀಸಿದ ರೈತರು

By

Published : Jun 9, 2023, 10:55 PM IST

ದಾವಣಗೆರೆ:ಸದ್ಯ ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆ ಒಣಗಲಾರಂಭಿಸಿವೆ. ಮಳೆ ಕೈ ಕೊಟ್ಟಿದ್ದರಿಂದ ರೈತರು ಆಕಾಶದತ್ತ ನೋಡ್ತಾ ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ, ದಾವಣಗೆರೆಯ ರೈತರು ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದ ರೈತರು, ಮಳೆ ಇಲ್ಲದೆ ಹೈರಾಣಾಗಿದ್ದಾರೆ. ಮಳೆಗಾಗಿ ಕಾದು ಕಾದು ಸುಸ್ತು ಹೋಗಿರುವ ಅನ್ನದಾತರು ಕೊನೆಗೆ ದೇವರ ಮೊರೆ ಹೋಗಿ ಕಂಬಳಿ ಬೀಸುವ ಮೂಲಕ ಮಳೆರಾಯನಿಗೆ ಆಹ್ವಾನಿಸಿದ್ದಾರೆ. 

ಆಕಾಶದತ್ತ ಕಂಬಳಿ ಬೀಸಿ ವರುಣ ದೇವರ ಕೃಪೆಗಾಗಿ ರೈತರು ಪ್ರಾರ್ಥಿಸುತ್ತಿದ್ದಾರೆ. ಮಲೆ ಕುಂಬಳೂರು ಗುಡ್ಡದ ಮೇಲಿರೋ ಕೊಲ್ಲಾಪುರ ಲಕ್ಷ್ಮೀಗೆ ಕಂಬಳಿ ಹಾಸಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪೂರ್ವಕ್ಕೆ ಮುಖ ಮಾಡಿದ ರೈತರು ಮೋಡಕ್ಕೆ ಕಂಬಳಿಯ ಮೂಲಕ ಮಳೆಗೆ ಆಹ್ವಾನ ನೀಡಿರುವ ದೃಶ್ಯ ಕಂಡುಬಂತು. ಜೊತೆಗೆ ಕುಂಬಲೂರು ಗ್ರಾಮದ ಆಂಜನೇಯ ಸ್ವಾಮಿ ಪೂಜೆ ನೆರವೇರಿಸಲಾಯಿತು. 

ಮುಂಗಾರು ಮಳೆ ಇಲ್ಲದ ಕಾರಣಕ್ಕೆ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯ ಆರಂಭಿಸಿಲ್ಲ. ಕೆರೆ, ಬಾವಿ ಹಾಗೂ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಧಾರ್ಮಿಕ ನಂಬಿಕೆ ಮೂಲಕ ಮೋಡದತ್ತ ಗ್ರಾಮಸ್ಥರ ಸಮ್ಮುಖದಲ್ಲಿ ಮುಖ ಮಾಡಿದರು. ಜೂನ್ ತಿಂಗಳ ಮೊದಲನೇ ವಾರದಲ್ಲಿ ಮಳೆ ಆಗಮನ ಆಗ್ಬೇಕಾಗಿತ್ತು. ಆದ್ರೆ, ಮಳೆ ಬಾರದ ಹಿನ್ನೆಲೆಯಲ್ಲಿ ರೈತರು, ದೇವದ ಮೊರೆ ಹೋಗಿ, ಮೋಡಗಳತ್ತ ಕಂಬಳಿ ಬೀಸಿದರು. ಈ ಕಂಬಳಿ ಬೀಸುವ ಪದ್ಧತಿಯ ಬಹುಹಿಂದಿನಿಂದಲೂ ಆಚರಣೆಯಲ್ಲಿದೆ.

ಇದನ್ನೂ ಓದಿ:ಚಿರತೆಯೊಂದಿಗೆ ಹೋರಾಡಿ ಮಾಲೀಕನ ಪ್ರಾಣ ಉಳಿಸಿದ 'ಪುಣ್ಯಕೋಟಿ'; ಚಿರತೆ ಹಿಮ್ಮೆಟ್ಟಿಸಲು ಹಸುವಿಗೆ ಸಾಥ್ ಕೊಟ್ಟ ಶ್ವಾನ!

ABOUT THE AUTHOR

...view details