ಕರ್ನಾಟಕ

karnataka

ಗಂಗಾವತಿಯಲ್ಲಿ ಅನ್ನಚೆಲ್ಲಲು ನಿಮಿಷ ಸಾಕು - ಕಾಳು ಬೆಳೆಯಲು ವರುಷ ಬೇಕು ಅಭಿಯಾನ

ETV Bharat / videos

ಗಂಗಾವತಿಯಲ್ಲಿ ಅನ್ನಚೆಲ್ಲಲು ನಿಮಿಷ ಸಾಕು - ಕಾಳು ಬೆಳೆಯಲು ವರುಷ ಬೇಕು ಅಭಿಯಾನ

By

Published : Mar 1, 2023, 11:02 PM IST

ಗಂಗಾವತಿ:ನಗರದ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಚಾರಣ ಬಳಗದಿಂದ ಸಾರ್ವಜನಿಕರಿಗೆ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ`ಅನ್ನಚೆಲ್ಲಲು ನಿಮಿಷ ಸಾಕು - ಕಾಳು ಬೆಳೆಯಲು ವರುಷ ಬೇಕು' ಅಭಿಯಾನಕ್ಕೆ ಹಾಸ್ಯ ಭಾಷಣಕಾರ ಬಿ ಪ್ರಾಣೇಶ್​ ಚಾಲನೆ ನೀಡಿದರು. ನಂತರ ಮಾತನಾಡಿ ಪ್ರಾಣೇಶ್, ಅನ್ನದಾನಂ ಮಹಾದಾನಂ ಆಹಾರ ವ್ಯರ್ಥಂ ಮಹಾಪಾಪಂ ಎಂಬ ಶಾಸ್ತ್ರೋಕ್ತಿ ಇದೆ. ಹಸಿದವನಿಗೆ ಮಾತ್ರ ಅನ್ನದ ಬೆಲೆ ಗೊತ್ತಿರುತ್ತದೆ. ಹೀಗಾಗಿ ಅನ್ನದ ಬೆಲೆ, ರೈತರ ಶ್ರಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಮಾನ ಮನಸ್ಕರಿಂದ ಆರಂಭಿಸಲಾಗಿದೆ ಎಂದರು. ನಾವು ಎಲ್ಲ ಸಭೆ-ಸಮಾರಂಭದಲ್ಲಿ ಭಾಗಿಯಾಗಿ ಜನರಲ್ಲಿ ಆಹಾರದ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅನ್ನದಾನಕ್ಕಿಂತ ದೊಡ್ಡದಾದ ದಾನವಿಲ್ಲ. ಇಂದಿನ ದಿನಗಳಲ್ಲಿ ಆಹಾರವನ್ನು ತ್ಯಾಜ್ಯವನ್ನಾಗಿಸಿ ಎಸೆಯುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಪ್ರಾಣೇಶ್​ ಕಳವಳ ವ್ಯಕ್ತಪಡಿಸಿದರು. 

ಇದನ್ನೂ ಓದಿ:131 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ ಶಾಸಕ ನಾಗನಗೌಡ ಕಂದಕೂರ

ABOUT THE AUTHOR

...view details