ನಿರ್ಬಂಧದ ನಡುವೆ ಭರಚುಕ್ಕಿ ವೀಕ್ಷಣೆಗೆ ಬಂದ್ರು.. ಬಸ್ಕಿ ಹೊಡೆಸಿ ಮನೆಗೆ ಕಳಿಸಿದ್ರು ಪಿಎಸ್ಐ - PSI gave punishment to those who came to see Barachukki amid restrictions
ಚಾಮರಾಜನಗರ: ಕಾವೇರಿ ಹೊರಹರಿವು ಹೆಚ್ಚಾಗುತ್ತಿದ್ದಂತೆ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಾವೇರಿ ರುದ್ರ ರಮಣೀಯತೆ ವೀಕ್ಷಿಸಲು ಕಳ್ಳದಾರಿ ಹಿಡಿದು ಮಹಿಳೆಯರು ಸೇರಿದಂತೆ ಸೆಲ್ಫಿ ಹುಚ್ಚಾಟದಲ್ಲಿ ತೊಡಗಿದ್ದವರಿಗೆ ಕೊಳ್ಳೇಗಾಲ ಗ್ರಾಮಾಂತರ ಪಿಎಸ್ಐ ಮಂಜುನಾಥ್ ಕ್ಲಾಸ್ ತೆಗೆದುಕೊಂಡು 30ಕ್ಕೂ ಹೆಚ್ಚು ಮಂದಿಗೆ ಬುದ್ಧಿವಾದ ಹೇಳಿ ವಾಪಸ್ ಕಳುಹಿಸಿದ್ದಾರೆ. ಪುಂಡರಂತೆ ಕಂಡ 7-8 ಮಂದಿಗೆ ಬಸ್ಕಿ ಹೊಡೆಸಿ ಕಾನೂನು ಉಲ್ಲಂಘಿಸದಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಭರಚುಕ್ಕಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದವರು ಬಸ್ಕಿ ಹೊಡೆದು ಬಳಲಿ ಬೆಂಡಾದ ಬಳಿಕ ಮನೆಗೆ ವಾಪಸ್ ಆಗಿದ್ದಾರೆ.
Last Updated : Feb 3, 2023, 8:25 PM IST