ವೈನ್ ಶಾಪ್ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ: ಪ್ರತಿಭಟನಾಕಾರರ ಬಂಧನ - ವೈನ್ ಶಾಪ್ ಮುಚ್ಚಿಸಲು ರೋಲಿಂಗ್ ಶೆಟರ್
ಶಿವಮೊಗ್ಗ:ವೈನ್ ಶಾಪ್ ಬೇಡ ಎಂದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ನೂರು ಅಡಿ ರಸ್ತೆಯಲ್ಲಿ ಇಂದು ವೈನ್ಸ್ ಶಾಪ್ವೊಂದನ್ನು ತೆರೆಯಲಾಗಿತ್ತು. ಈ ಅಂಗಡಿಯಿಂದ ಸಾರ್ವಜನಿಕರಿಗೆ ಹಾಗೂ ಸ್ಥಳೀಯರಿಗೆ ಹಾಗೂ ಪಕ್ಕದಲ್ಲಿಯೇ ಶಾಲೆ ಪ್ರಾರಂಭವಾಗುವುದಿತ್ತು.
ಇಂತಹ ಸ್ಥಳದಲ್ಲಿಯೇ ವೈನ್ ಶಾಪ್ ತೆರೆದಿರುವುದಕ್ಕೆ ನವ ಕರ್ನಾಟಕ ನಿರ್ಮಾಣ ವೇದಿಕೆ ಅಂಗಡಿ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಸಂಘಟನೆಯವರು ಅಂಗಡಿ ತೆರವು ಮಾಡುವಂತೆ ಶರ್ಟ್ ಬಿಚ್ಚಿ ಉರುಳು ಸೇವೆ ಮಾಡಿದರು. ಸ್ಥಳಕ್ಕೆ ಅಬಕಾರಿ ಡಿಸಿ ಆಗಮಿಸುವಂತೆ ಪಟ್ಟು ಹಿಡಿದರು.
ಇದನ್ನೂ ಓದಿ:ಚಕ್ರ ಸ್ಫೋಟಗೊಂಡು ವಾಹನ ಪಲ್ಟಿ; ಅಪಾರ ಪ್ರಮಾಣದ ಮದ್ಯ ನಷ್ಟ
ಈ ವೇಳೆ ಪ್ರತಿಭಟಗಾರರು ವೈನ್ ಶಾಪ್ ಮುಚ್ಚಿಸಲು ರೋಲಿಂಗ್ ಶೆಟರ್ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದುಕೊಂಡು ಹೋದರು. ಇತ್ತ ವೈನ್ ಶಾಪ್ ಬೇಡ ಎಂದು ಪ್ರತಿಭಟನೆ ನಡೆಸುತ್ತಿದ್ದರೆ, ಇದೇ ಅಂಗಡಿಯ ಇನ್ನೊಂದು ಭಾಗದಲ್ಲಿ ವೈನ್ಶಾಪ್ಬೇಕೆಂದು ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.
ಇದನ್ನು ಓದಿ:ಶಿವಮೊಗ್ಗ: ಜಡಿಮಳೆಗೆ ಕೆಸರುಗದ್ದೆಯಾದ ರಸ್ತೆ; ಭತ್ತ ನಾಟಿ ಮಾಡಿ ಅವ್ಯವಸ್ಥೆಗೆ ಆಕ್ರೋಶ