ಕರ್ನಾಟಕ

karnataka

ಸರ್ಕಾರಿ ಶಾಲಾ ಶಿಕ್ಷಕಿಯ ವರ್ಗಾವಣೆ ವಿರೋಧಿಸಿದ ಪೋಷಕರು

ETV Bharat / videos

ಕೋಲಾರ: ಸರ್ಕಾರಿ ಶಾಲಾ ಶಿಕ್ಷಕಿಯ ವರ್ಗಾವಣೆ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ - Parents insist on childrens teasing

By

Published : Aug 7, 2023, 6:16 PM IST

ಕೋಲಾರ :ಸರ್ಕಾರಿ ಶಾಲಾ ಶಿಕ್ಷಕಿಯ ವರ್ಗಾವಣೆಯನ್ನು ವಿರೋಧಿಸಿ ಗ್ರಾಮಸ್ಥರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ಜರುಗಿದೆ‌. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಮ್ಮೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ‌ ಶಾಲೆ ಬಳಿ ಈ ಘಟನೆ ನಡೆದಿದ್ದು, ಶಾಲೆಯ ನಿರ್ಮಲ ಎಂಬ ಶಿಕ್ಷಕಿಯ ವರ್ಗಾವಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ರು. 

2004 ರಿಂದ ಶಿಕ್ಷಕಿ ನಿರ್ಮಲ ಅವರು ತಮ್ಮೇನಹಳ್ಳಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಗ್ರಾಮಸ್ಥರಿಂದ ಉತ್ತಮ ಶಿಕ್ಷಕಿ ಎನಿಸಿಕೊಂಡಿದ್ದರು. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಬದಲು ಶಿಕ್ಷಕಿ ನಿರ್ಮಲ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆದರೆ, 15 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಅವರನ್ನು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಈ ವರ್ಗಾವಣೆಯನ್ನ ರದ್ದುಪಡಿಸದಿದ್ದರೆ ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ. ಶಾಲೆಗೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಜೊತೆಗೆ ಶಿಕ್ಷಕಿಯ ವರ್ಗಾವಣೆ ರದ್ದುಪಡಿಸದಿದ್ದಲ್ಲಿ ತಮ್ಮ‌ ಮಕ್ಕಳ ಟೀಸಿ ನೀಡುವಂತೆ ಒತ್ತಾಯ ಮಾಡಿದ್ದಾರೆ‌. ಸದ್ಯ ತಮ್ಮೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 19 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶಿಕ್ಷಕಿಯ ವರ್ಗಾವಣೆಯಿಂದಾಗಿ ಎಲ್ಲಾ ಮಕ್ಕಳ ಟಿಸಿ ಕೊಡುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ. 

ಇದನ್ನೂ ಓದಿ:ನೆಚ್ಚಿನ‌ ಶಿಕ್ಷಕಿ ವರ್ಗಾವಣೆ.. ಬೀಳ್ಕೊಡುಗೆ ವೇಳೆ ನಮ್ಮನ್ನು ಬಿಟ್ಟೋಗಬೇಡಿ ಮಿಸ್​ ಎಂದು ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು.. ಭಾವುಕರಾಗಿ ಕಣ್ಣೀರಿಟ್ಟ ಶಿಕ್ಷಕಿ

ABOUT THE AUTHOR

...view details