ಕರ್ನಾಟಕ

karnataka

ವಿದ್ಯಾರ್ಥಿಗಳಿಂದ ಪ್ರತಿಭಟನೆ

ETV Bharat / videos

'ಶಕ್ತಿ ಯೋಜನೆ' ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ - ವಿಡಿಯೋ

By

Published : Jun 29, 2023, 10:44 AM IST

Updated : Jun 29, 2023, 11:58 AM IST

ಗಂಗಾವತಿ(ಕೊಪ್ಪಳ): ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ ಘೋಷಣೆಯಂತೆ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದೆ. ಆದರೆ, ಇದು ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ. ಇದೀಗ ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ವಿರೋಧಿಸಿ ನಗರದಲ್ಲಿ ಬುಧವಾರ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಶಕ್ತಿ ವಿರೋಧಕ್ಕೆ ಕಾರಣ ಏನು?:ರಾಜ್ಯ ಸರ್ಕಾರ ಶಕ್ತಿ ಯೋಜನೆ ಘೋಷಣೆ ಮಾಡಿದ ಬಳಿಕ ಸಾರಿಗೆ ವಾಹನಗಳಲ್ಲಿ ಮಹಿಳೆಯರ ಪ್ರಯಾಣ ಅಧಿಕವಾಗಿದೆ. ಇದು ಶಾಲಾ-ಕಾಲೇಜುಗಳ ಮೇಲೂ ಪರಿಣಾಮ ಬೀರಿದೆ. ಸಾರಿಗೆ ವಾಹನಗಳ ಕೊರತೆಯ ಸಮಸ್ಯೆ ಅಧಿಕವಾಗಿದೆ. ಗ್ರಾಮೀಣ ಭಾಗದ ಶಾಲಾ-ಕಾಲೇಜಿನ ಮಕ್ಕಳು ನಿತ್ಯ ನಗರಕ್ಕೆ ಆಗಮಿಸುತ್ತಿದ್ದು, ಸಕಾಲಕ್ಕೆ ಬರಲಾಗದೇ ತೀವ್ರ ಸಮಸ್ಯೆಯಾಗಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.  

ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಸೇರಿದ್ದ ನಗರದ ಸುಮಾರು 20ಕ್ಕೂ ಹೆಚ್ಚು ಶಾಲಾ - ಕಾಲೇಜಿನ ಮಕ್ಕಳು ಕೆಲಕಾಲ ರಸ್ತೆ ತಡೆ ನಡೆಸಿದರು. ಪರಿಣಾಮ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಕಂಪ್ಲಿ, ಬೂದಗುಂಪಾ, ಆನೆಗೊಂದಿ, ಕನಕಗಿರಿ, ಕಾರಟಗಿ ಭಾಗದಿಂದ ನಿತ್ಯ ನೂರಾರು ಮಕ್ಕಳು ಶಾಲಾ-ಕಾಲೇಜಿಗೆ ಗಂಗಾವತಿಗೆ ಬರುತ್ತಿದ್ದಾರೆ. ಆದರೆ, ವಾಹನಗಳ ಸಮಸ್ಯೆಯಿಂದಾಗಿ ಸಕಾಲಕ್ಕೆ ಶಾಲಾ-ಕಾಲೇಜಿಗೆ ಹೋಗಲಾಗುತ್ತಿಲ್ಲ. ಇದರಿಂದ ಶೈಕ್ಷಣಿಕವಾಗಿ ನಮಗೆ ಸಮಸ್ಯೆಯಾಗುತಿದೆ. ಈ ಬಗ್ಗೆ ಸಂಬಂಧಿತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಕೂಡಲೆ ಕಾರಟಗಿ ಭಾಗಕ್ಕೆ ಎರಡು ಮತ್ತು ಉದ್ದೇಶಿತ ಮಾರ್ಗದಲ್ಲಿ ತಲಾ ಒಂದು ಹೆಚ್ಚುವರಿ ವಾಹನಗಳನ್ನು ಓಡಿಸುವಂತೆ ಧರಣಿ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ದೈಹಿಕ ಶಿಕ್ಷಕರ ವರ್ಗಾವಣೆ ವಿರೋಧ: ಶಾಲಾ ಕೊಠಡಿಗೆ ಬೀಗ ಹಾಕಿ ಆವರಣದಲ್ಲೇ ಮಕ್ಕಳಿಗೆ ಪಾಠ

Last Updated : Jun 29, 2023, 11:58 AM IST

ABOUT THE AUTHOR

...view details