ಭೂ ವಿವಾದ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಬೆಂಬಲಿಸಿ ಪ್ರತಿಭಟನೆ.. - etv bharat kannada
ಬೋಲ್ಪುರ್(ಪಶ್ಚಿಮ ಬಂಗಾಳ): ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ವಿಶ್ವ ಭಾರತಿ ವಿಶ್ವವಿದ್ಯಾಲಯದ 13 ದಶಮಾಂಶದಷ್ಟು ಭೂಮಿ ಆಕ್ರಮಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಖಂಡಿಸಿ ಶಾಂತಿನಿಕೇತನದ ಬಳಿ ಮಾನವ ಸರಪಳಿ ಹಾಗೂ ನಾಟಕ ಪ್ರದರ್ಶನ ಮೂಲಕ ಪ್ರತಿಭಟನೆ ನಡೆಯಿತು. ಇಂದು ಸಾಮಾಜಿಕ ಘನತೆ ಸಂರಕ್ಷಣಾ ಸಮಿತಿ ವತಿಯಿಂದ ‘ಪ್ರತಿಚಿ’ ಮನೆ ಪಕ್ಕದ ಜಂಕ್ಷನ್‌ನಿಂದ ವಿಶ್ವಭಾರತಿಯ ಸಹಕಾರಿ ಬ್ಯಾಂಕ್‌ವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ಸಮಿತಿಯ ಸದಸ್ಯರು ಮತ್ತು ಕಲಾವಿದರು ರಕ್ತಕರವಿ ನಾಟಕ ಪ್ರದರ್ಶಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ವಿಶ್ವಭಾರತಿ ಪ್ರಾಧಿಕಾರಗಳ ಪರವಾಗಿ ಹಂಗಾಮಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹುವಾ ಬಂಡೋಪಾಧ್ಯಾಯ ಮಾತನಾಡಿ "ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ. ಮ್ಯಾಜಿಸ್ಟ್ರೇಟ್ ಅಮರ್ತ್ಯ ಸೇನ್ ಅವರ ಮನೆ ಪ್ರತಿಚಿಯ ಮುಂದೆ ಸೆಕ್ಷನ್ 144 ಅನ್ನು ಜಾರಿಗೊಳಿಸಿದ್ದಾರೆ. ಅದನ್ನು ಇನ್ನೂ ಹಿಂಪಡೆದಿಲ್ಲ. ಕಾನೂನುನನ್ನು ಉಲ್ಲಾಂಘಿಸಿ ಇಷ್ಟು ಜನರು ಹೇಗೆ ಒಟ್ಟುಗೂಡಿ ಪ್ರತಿಭಟಿಸುವುದು?. ಕಾನೂನು ವಿಶ್ವಭಾರತಿಗೆ ಮಾತ್ರವೇ?" ಎಂದು ಪ್ರಶ್ನಿಸಿದರು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ತಮ್ಮ ಪ್ರತಿಚಿ ಮನೆಯ ಆವರಣದಲ್ಲಿ 13 ದಶಮಾಂಶ ಹೆಚ್ಚುವರಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯ ಆರೋಪಿಸಿದೆ. ಸೇನ್ ಅವರ ದಿವಂಗತ ತಂದೆ ಅಶುತೋಷ್ ಸೇನ್ ಅವರ ಇಚ್ಛೆಯ ಮೇರೆಗೆ, ಭೂಮಿ ಪಿತ್ರಾರ್ಜಿತವಾಗಿ ತನಗೆ ಸೇರಿದೆ ಎಂದು ಅಮರ್ತ್ಯ ಸೇನ್ ಪ್ರತಿಪಾದಿಸುತ್ತಿದ್ದಾರೆ. ಈ ಸಂಬಂಧ ಪ್ರೊಫೆಸರ್ ಸೇನ್ ಈಗಾಗಲೇ ಸೂರಿ ಜಿಲ್ಲಾ ನ್ಯಾಯಾಲಯ ಮತ್ತು ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯ ಅಮರ್ತ್ಯ ಸೇನ್ ವಿಶ್ವಭಾರತಿ ಭೂಮಿಯನ್ನು ತೆರವು ಮಾಡುವ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇಂದು ನಡೆದ ಪ್ರತಿಭಟೆನೆಯಲ್ಲಿ ಕಲ್ಕತ್ತಾ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನಟರು, ಸಮಾಜ ಸೇವಕರು, ಪ್ರಾಧ್ಯಾಪಕರು, ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ಇದನ್ನೂ ಓದಿ:ಅಮರ್ತ್ಯ ಸೇನ್ ವಿರುದ್ಧ ವಿಶ್ವಭಾರತಿ ವಿವಿ ನೋಟಿಸ್ಗೆ ಕಲ್ಕತ್ತಾ ಹೈಕೋರ್ಟ್ ತಡೆ