ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ: ವಿಡಿಯೋ
Published : Sep 15, 2023, 11:03 PM IST
ಬೆಂಗಳೂರು: ಆಂಧ್ರಪ್ರದೇಶದ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿಂದು ಪ್ರತಿಭಟನೆ ನಡೆಯಿತು. ಐಟಿ ಸಿಟಿಯಾಗಿರುವ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು ಚಂದ್ರಬಾಬು ಬೆಂಬಲವಾಗಿ ರಸ್ತೆಗಿಳಿದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಾಫ್ಟ್ ವೇರ್ ಉದ್ಯೋಗಿಗಳು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನೆಡೆಸಿದರು. ಐಟಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಚಂದ್ರಬಾಬು ಅವರನ್ನು ಜೈಲಿಗೆ ಹಾಕಿರುವುದನ್ನು ಖಂಡಿಸಿದರು.
ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧಿತರಾಗಿರುವ ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು ಬಗ್ಗೆ ಐಟಿ ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದರು. ಇದುವರೆಗೂ ಹೈದರಾಬಾದ್, ವಿಜಯವಾಡದಲ್ಲಿ ಟೆಕ್ಕಿಗಳು ರಸ್ತೆಗಿಳಿದಿದ್ದರು. ಇದೀಗ ಬೆಂಗಳೂರಿನ ಐಟಿ ಉದ್ಯೋಗಿಗಳೂ ಚಂದ್ರಬಾಬು ಬೆಂಬಲಕ್ಕೆ ನಿಂತಿದ್ದಾರೆ. ಚಂದ್ರಬಾಬು ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಘೋಷಣೆ ಕೂಗಿದರು. ಚಂದ್ರಬಾಬು ಅವರ ಬಂಧನ ಕಾನೂನು ಬಾಹಿರ ಮತ್ತು ಗುಂಪುಗಾರಿಕೆಯ ಫಲ. ಈಗ ನಾವೆಲ್ಲರೂ ಲಕ್ಷಗಳಲ್ಲಿ ಸಂಬಳ ಪಡೆಯುತ್ತಿದ್ದರೆ ಅದಕ್ಕೆ ಚಂದ್ರಬಾಬು ನಾಯ್ಡು ಅವರ ಕಾರಣದಿಂದ ಎಂದು ಸ್ಮರಿಸಿದರು.
ಐಟಿ ಉದ್ಯೋಗಿಗಳು ಮಳೆಯಲ್ಲೂ ಧರಣಿ ಮುಂದುವರೆಸಿದರು. ಆಂಧ್ರದ ಭವಿಷ್ಯದ ಪೀಳಿಗೆ ಚೆನ್ನಾಗಿರಬೇಕಾದರೆ ಚಂದ್ರಬಾಬು ಮತ್ತೆ ಅಧಿಕಾರಕ್ಕೆ ಬರಬೇಕು. ಚಂದ್ರಬಾಬು ಅವರಿಗೆ ಈ ಕಷ್ಟಗಳು ತಾತ್ಕಾಲಿಕ ಎಂದು ತೊಳೆದ ಮುತ್ತಿನಂತೆ ಬೇಗ ಹೊರಬರಲಿ ಎಂದು ಹಾರೈಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಐಟಿ ಉದ್ಯೋಗಿಗಳು ಬೆಂಗಳೂರು ನಗರದಲ್ಲಿ ರ‍್ಯಾಲಿ ನಡೆಸಿದರು. ಚಂದ್ರಬಾಬು ಪರವಾಗಿ ಮತ್ತು ಜಗನ್ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ:ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಆಗ್ರಹಿಸಿ ಪ್ರತಿಭಟನೆ