ಕರ್ನಾಟಕ

karnataka

ಬೆಂದೂರ್​ ವೆಲ್ ಬಳಿ ರಸ್ತೆ ಅಪಘಾತ

ETV Bharat / videos

ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು.. ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬೆಂದೂರ್​ ವೆಲ್ ಬಳಿ ರಸ್ತೆ ಅಪಘಾತ

By

Published : Mar 30, 2023, 9:45 PM IST

ಮಂಗಳೂರು :ನಗರದಲ್ಲಿ ಖಾಸಗಿ ಬಸ್​ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದಾಗಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬೆಂದೂರ್ ವೆಲ್​ನಲ್ಲಿ ಸರ್ಕಲ್​ನಲ್ಲಿ ನಡೆದಿದೆ. ಖಾಸಗಿ ಬಸ್​ಗಳ ಧಾವಾಂತಕ್ಕೆ ಒಂದೇ ವಾರದೊಳಗಡೆ ಇದು ಎರಡನೇ ಬಲಿಯಾಗಿದೆ. ಮಾರ್ಚ್ 24 ರಂದು ತಾಯಿ ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್​ವೊಂದು ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು.    

ಇಂದು ನಡೆದ ಅಪಘಾತದಲ್ಲಿ ಐರಿನ್ ಡಿಸೋಜ(65) ಎಂಬುವವರು ಮೃತಪಟ್ಟ ಮಹಿಳೆ. ಐರಿನ್ ಡಿಸೋಜ ಮಧ್ಯಾಹ್ನ 12ರ ಸುಮಾರಿಗೆ ಆ್ಯಗ್ನೇಸ್ ಸರ್ಕಲ್ ನಿಂದ ಬೆಂದೂರು ವೆಲ್ ಸರ್ಕಲ್​ಗೆ ಬಂದ ಖಾಸಗಿ ಬಸ್​ನಲ್ಲಿ ಪ್ರಯಾಣಿಕರ ಜೊತೆಗೆ ಐರಿನ್ ಡಿಸೋಜ ಅವರು ಇಳಿದಿದ್ದಾರೆ. ನಂತರ ಬಸ್ ಮುಂಭಾಗದಿಂದ ರಸ್ತೆಯನ್ನು ದಾಟುತ್ತಿದ್ದ ವೇಳೆ ಬಸ್ ಚಾಲಕ ಏಕಾಏಕಿ ನಿರ್ಲಕ್ಷ್ಯದಿಂದ ಬಸ್​ ಅನ್ನು ಮುಂದಕ್ಕೆ ಚಲಾಯಿಸಿದ್ದಾನೆ. 

ಪರಿಣಾಮ ಖಾಸಗಿ ಬಸ್ ಐರಿನ್ ಡಿಸೋಜ ಅವರ ಮೇಲೆಯೇ ಹರಿದು ಹೋಗಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆದರೇ ಘಟನೆ ನಡೆದ ಬಳಿಕವೂ ಚಾಲಕ ಬಸ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ಇನ್ನು ಈ ಸಂಬಂಧ ಕಂಕನಾಡಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಇದನ್ನೂ ಓದಿ :ವಿವಾಹಿತ ಮಹಿಳೆ ಆತ್ಮಹತ್ಯೆ ಪ್ರಕರಣ: ತನಿಖೆಗೆ ಒತ್ತಾಯಿಸಿ ಪತಿಯಿಂದ ಎಸ್ಪಿಗೆ ಮನವಿ

ABOUT THE AUTHOR

...view details