ಕರ್ನಾಟಕ

karnataka

ಜೈಲಿನೊಳಗೆ ಖೈದಿಗಳಿಂದ ದೀಪಾವಳಿ ಹಬ್ಬಕ್ಕಾಗಿ ಬಣ್ಣ ಬಣ್ಣದ ಮೇಣದ ಬತ್ತಿ ತಯಾರು

ETV Bharat / videos

Watch... ಜೈಲಿನೊಳಗೆ ಖೈದಿಗಳಿಂದ ದೀಪಾವಳಿ ಹಬ್ಬಕ್ಕಾಗಿ ಬಣ್ಣ ಬಣ್ಣದ ಮೇಣದ ಬತ್ತಿ ತಯಾರಿ.. - Prisoners in Amphala Jail

By ETV Bharat Karnataka Team

Published : Nov 7, 2023, 9:19 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜಮ್ಮು ಜಿಲ್ಲೆಯ ಅಂಫಲ್ಲಾ ಜೈಲಿನಲ್ಲಿರುವ ಖೈದಿಗಳು ಬೆಳಕಿನ ಹಬ್ಬಕ್ಕಾಗಿ ವರ್ಣರಂಜಿತ ಮೇಣದ ಬತ್ತಿಗಳನ್ನು ತಯಾರಿಸುತ್ತಿದ್ದಾರೆ. ನುರಿತ ತರಬೇತುದಾರರ ಮಾರ್ಗದರ್ಶನದಲ್ಲಿ ಮೇಣದ ಬತ್ತಿಗಳನ್ನು ತಯಾರಿಸುತ್ತಿದ್ದು, ಅವಿರತವಾಗಿ ಶ್ರಮಿಸುತ್ತಿದ್ದಾರೆ. ದೀಪಾವಳಿಗಾಗಿ 'ರೋಶ್ನಿ' ಬ್ರಾಂಡ್ ಹೆಸರಿನಲ್ಲಿ ಮೇಣದಬತ್ತಿಗಳನ್ನು ರೆಡಿ ಮಾಡುತ್ತಿದ್ದಾರೆ. ವಿವಿಧ ಬಣ್ಣದ, ಬೇರೇ ಬೇರೆ ಶೈಲಿಯ ಮೇಣದಬತ್ತಿಗಳು ತಯಾರಾಗುತ್ತಿದ್ದು, ಈ ಮೂಲಕ ಖೈದಿಗಳು ಜೈಲಿನಲ್ಲಿಯೇ  ಲಾಭದಾಯಕ ಉದ್ಯೋಗವನ್ನು ಮಾಡುತ್ತಿದ್ದು, ಇವರ ಕೌಶಲ್ಯವು ಅಭಿವೃದ್ದಿಯಾಗುತ್ತಿದೆ. ಅಲ್ಲದೇ ತಪ್ಪು ಮಾಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಖೈದಿಗಳು ಈ ರೀತಿಯ ಕೆಲಸ ಮಾಡುವುದರಿಂದ ಅವರಲ್ಲಿ ಧನಾತ್ಮಕ ಸುಧಾರಣೆಯಾಗುತ್ತದೆ. ಇಲ್ಲಿನ ಖೈದಿಗಳು ತಯಾರಿಸುತ್ತಿರುವ ಮೇಣದಬತ್ತಿಗಳನ್ನು ಜೈಲಿನ ಹೊರಗಿನ 'ಸುಧಾರ್' ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಜೈಲಿನಲ್ಲಾದ ಈ ಬೆಳವಣಿಗೆ ಕುರಿತು ಜಮ್ಮುವಿನ ಅಂಫಾಲಾ ಜೈಲಿನ ಜೈಲು ಅಧೀಕ್ಷಕ ಹರೀಶ್ ಕೊತ್ವಾಲ್ ಪ್ರಶಂಸಿದ್ದು, ಜೈಲಿನ ಆಡಳಿತದಿಂದ ಖೈದಿಗಳ ಕಲ್ಯಾಣವಾಗುತ್ತಿದೆ ಎಂದಿದ್ದಾರೆ. ಜತೆಗೆ ಈ ರೀತಿಯ ವೃತ್ತಿಪರ ಚಟುವಟಿಕೆಗಳಲ್ಲಿ ಖೈದಿಗಳನ್ನು ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ಅವರ ಮೇಲೆ ಇರುವ ದೃಷ್ಟಿಕೋನ ಬದಲಾಗುವಲ್ಲಿ ಸಹಾಯವಾಗುತ್ತದೆ ಎಂದು ಕಾರಾಗೃಹದ ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ.  

ಇದನ್ನೂ ಓದಿ:ಪರಿಸರ ರಕ್ಷಣೆಗೆ ನ್ಯಾಯಾಲಯಗಳು ಪ್ರತಿ ಬಾರಿ ಆದೇಶಿಸಬೇಕಿಲ್ಲ, ಜನರೇ ಹೊಣೆಗಾರಿಕೆ ಮೆರೆಯಬೇಕು: ಸುಪ್ರೀಂಕೋರ್ಟ್​

ABOUT THE AUTHOR

...view details