ಬರ್ತ್‌ಡೇ ದಿನ ಕುಶಲಕರ್ಮಿಗಳೊಂದಿಗೆ ಸಂವಾದ; ಮೆಟ್ರೋದಲ್ಲಿ ಮೋದಿ ಪ್ರಯಾಣ- ವಿಡಿಯೋ - ದ್ವಾರಕಾದ ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್
Published : Sep 17, 2023, 2:26 PM IST
ನವದೆಹಲಿ:ಇಲ್ಲಿನದ್ವಾರಕಾದಲ್ಲಿರುವ ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಕುಶಲಕರ್ಮಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲಿ ಸಿದ್ದಪಡಿಸಿದ ಕಲಾಕೃತಿಗಳ ಬಗ್ಗೆ ಸ್ವತಃ ವಿಚಾರಿಸಿ ಮಾಹಿತಿ ಪಡೆದುಕೊಂಡರು. ಹಾಗೆಯೇ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ, ಪ್ರಯಾಣಿಕರೊಂದಿಗೆ ಜನಸಾಮಾನ್ಯರಂತೆ ಸಂವಾದ ನಡೆಸಿ ಸಂತಸಪಟ್ಟರು. ಮೆಟ್ರೋದಲ್ಲಿ ಮೋದಿ ಅವರ 73ನೇ ವರ್ಷದ ಹುಟ್ಟುಹಬ್ಬಕ್ಕೆ ಯುವತಿಯೊಬ್ಬರು ಹಾಡು ಹೇಳಿ ಶುಭ ಕೋರಿದರು. ಪ್ರಯಾಣಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಮಾರ್ಗವನ್ನು ದ್ವಾರಕಾ ಸೆಕ್ಟರ್ 21ರಿಂದ ಹೊಸ ಮೆಟ್ರೋ ಸ್ಟೇಷನ್ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ವರೆಗಿನ ವಿಸ್ತರಣೆಯನ್ನು ಮೋದಿ ಉದ್ಘಾಟಿಸಿದರು. ಬಳಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರೊಂದಿಗೆ ಪ್ರಯಾಣಿಸಿದರು. ಯಶೋಭೂಮಿ ದ್ವಾರಕಾ ಸೆಕ್ಟರ್ 25 ವರೆಗಿನ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನ ಒಟ್ಟು ಉದ್ದ 24.9 ಕಿಮೀ ಇದೆ ಎಂದು ಡಿಎಂಆರ್‌ಸಿ ಹೇಳಿಕೆಯಲ್ಲಿ ತಿಳಿಸಿದೆ. ಇಂದಿನಿಂದ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆ ವೇಗವನ್ನು 90 ರಿಂದ 120 ಕಿ.ಮೀ/ಗಂಟೆಗೆ ಹೆಚ್ಚಿಸಿ ಪ್ರಯಾಣ ಸಮಯವನ್ನು ಕಡಿಮೆ ಮಾಡಲಾಗುತ್ತಿದೆ.
ಇದನ್ನೂ ಓದಿ:'ಪಿಎಂ ವಿಶ್ವಕರ್ಮ ಯೋಜನೆ'ಗೆ ಇಂದು ಚಾಲನೆ ನೀಡಲಿದ್ದಾರೆ ಮೋದಿ: ₹13,000 ಕೋಟಿ ಅನುದಾನ