ರಾಂಚಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ನಾಳೆ ಬಿರ್ಸಾ ಮುಂಡಾ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿ - ರಾಂಚಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ
Published : Nov 14, 2023, 11:09 PM IST
ರಾಂಚಿ (ಜಾರ್ಖಂಡ್): ಪ್ರಧಾನಿ ನರೇಂದ್ರ ಮೋದಿ ಎರಡು ದಿನದ (ನವೆಂಬರ್ 14 ಮತ್ತು 15) ಜಾರ್ಖಂಡ್ ಪ್ರವಾಸದಲ್ಲಿದ್ದಾರೆ. ಮೋದಿ ಅವರು ರಾತ್ರಿ 8 ಗಂಟೆಗೆ ರಾಂಚಿ ತಲುಪಲಿದ್ದು, ವಿಮಾನ ನಿಲ್ದಾಣದಿಂದ ಹಿನೂ, ಬಿರ್ಸಾ ಚೌಕ್, ಅರ್ಗೋರಾ, ಶಹಜಾನಂದ್ ಮತ್ತು ರತು ರಸ್ತೆ ಮೂಲಕ ರಾಜಭವನಕ್ಕೆ ರೋಡ್ ಶೋ ಮೂಲಕ ತೆರಳಿದ್ದಾರೆ. ಮಂಗಳವಾರ ಇಂದೋರ್‌ನಲ್ಲಿ (ಮಧ್ಯಪ್ರದೇಶ) ಚುನಾವಣಾ ಪ್ರಚಾರ ಮುಗಿಸಿದ ಮೋದಿ ನೇರವಾಗಿ ರಾಂಚಿಗೆ ಬಂದಿಳಿದಿದ್ದಾರೆ.
ನಾಳೆ (ನ.15) ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆಳಗ್ಗೆ 9:30ರ ಸುಮಾರಿಗೆ ರಾಂಚಿಯಲ್ಲಿರುವ ಬಿರ್ಸಾ ಮುಂಡಾ ಸ್ಮಾರಕ ಪಾರ್ಕ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಉಲಿಹತು ಗ್ರಾಮಕ್ಕೆ ಆಗಮಿಸಿ ಅಲ್ಲಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ಖುಂಟಿ ಎಂಬಲ್ಲಿ ಆಯೋಜಿಸಲಾಗಿರುವ ಮೂರನೇ ಜನಜಾತಿಯ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ 'ವಿಕಾಸ್ ಭಾರತ್ ಸಂಕಲ್ಪ ಯಾತ್ರೆ' ಅಭಿಯಾನ ಪ್ರಾರಂಭಿಸಲಿದ್ದಾರೆ. ಇದರ ಭಾಗವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ 2.5 ಲಕ್ಷ ಗ್ರಾಮ ಪಂಚಾಯಿತಿಗಳು ಮತ್ತು 3,700 ನಗರ ಸ್ಥಳೀಯ ಸಂಸ್ಥೆಗಳನ್ನು ಉನ್ನತೀಕರಿಸುವ ಗುರಿ ಹೊಂದಿದೆ.
ಇದನ್ನೂ ಓದಿ:31 ವರ್ಷಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಕಂಡಕ್ಟರ್ ಪರ ಹೈಕೋರ್ಟ್ ತೀರ್ಪು: ಬಾಕಿ ವೇತನ ಪಾವತಿಸುವಂತೆ ಆದೇಶ