ಕರ್ನಾಟಕ

karnataka

ವಿಶ್ವದ ಅತಿದೊಡ್ಡ ಸಭಾಂಗಣ ಯಶೋಭೂಮಿಯ ಮೊದಲ ಹಂತ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ETV Bharat / videos

ವಿಶ್ವದ ಅತಿದೊಡ್ಡ ಸಭಾಂಗಣ 'ಯಶೋಭೂಮಿ'ಯ ಮೊದಲ ಹಂತ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ- ವಿಡಿಯೋ

By ETV Bharat Karnataka Team

Published : Sep 17, 2023, 1:15 PM IST

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಇಂದು ಇಲ್ಲಿನ ದ್ವಾರಕಾದಲ್ಲಿರುವ ಇಂಡಿಯಾ ಇಂಟರ್​ನ್ಯಾಷನಲ್​ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ 'ಯಶೋಭೂಮಿ'ಯ (ಐಐಸಿಸಿ) ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದರು. ಬೃಹತ್​ ಸಭಾಂಗಣಕ್ಕೆ​ ಯಶೋಭೂಮಿ ಎಂದು ನಾಮಕರಣ ಮಾಡಲಾಗಿದೆ. 1.07 ಲಕ್ಷ ಚದರ ಮೀಟರ್​ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ಸಭಾಂಗಣವನ್ನು ಭವ್ಯವಾಗಿ ನಿರ್ಮಿಸಲಾಗಿದೆ. ಇಲ್ಲಿ ಬೃಹತ್ ಪ್ರದರ್ಶನ, ವ್ಯಾಪಾರ ಮೇಳ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಸಭಾಂಗಣವು 1 ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 13 ಇತರ ಸಭಾಂಗಣಗಳು ಸೇರಿ ಒಟ್ಟು 15 ಕನ್ವೆನ್ಷನ್ ಹಾಲ್‌ಗಳನ್ನು ಹೊಂದಿದೆ. ಒಟ್ಟು 11,000 ಪ್ರತಿನಿಧಿಗಳ ಆಸನದ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ದೇಶದಲ್ಲೇ ಅತಿ ದೊಡ್ಡ ಎಲ್​ಇಡಿ ಪರದೆಯನ್ನು ಅಳವಡಿಸಲಾಗಿದೆ. ಮುಖ್ಯ ಸಭಾಂಗಣವೊಂದೇ 6,000 ಅತಿಥಿಗಳ ಆಸನ ಸಾಮರ್ಥ್ಯ ಹೊಂದಿದೆ. ಮರದ ನೆಲಹಾಸು ಮತ್ತು ಸ್ವಯಂಚಾಲಿತ ಕುರ್ಚಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಗೋಡೆಗಳ ಮೇಲೆ ಧ್ವನಿ ಫಲಕಗಳನ್ನು ಹಾಕಲಾಗಿದ್ದು, ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯದ ಅನುಭವ ನೀಡುತ್ತದೆ.

ಇದನ್ನೂ ಓದಿ :ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ 'ಯಶೋಭೂಮಿ' ಉದ್ಘಾಟನೆಗೆ ಕ್ಷಣಗಣನೆ: ಏನಿದರ ವಿಶೇಷತೆ?

ABOUT THE AUTHOR

...view details