ಮುಜಾಫರ್‌ಪುರದ ಲಿಚ್ಚಿ ಹಣ್ಣು ಸವಿಯಲಿರುವ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ - ಲಿಚ್ಚಿ ಹಣ್ಣು ಸವಿಯಲಿರುವ ಪ್ರಧಾನಿ ಮೋದಿ
ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರ ರಾಜಮನೆತನದ ಪ್ರಸಿದ್ಧ ಲಿಚ್ಚಿ ಹಣ್ಣು ತನ್ನ ರುಚಿಯಿಂದ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪ್ರಸಿದ್ಧವಾಗಿದೆ. ಅದಕ್ಕೆ ಟ್ಯಾಗ್ ಕೂಡ ಸಿಕ್ಕಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವವಿಖ್ಯಾತ ಮುಜಾಫರ್‌ಪುರದ ಶಾಹಿ ಲಿಚ್ಚಿ ರುಚಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸವಿಯಲಿದ್ದಾರೆ.
"ಲಿಚ್ಚಿ ಹಣ್ಣನ್ನು ದೆಹಲಿಯ ರಾಷ್ಟ್ರಪತಿ ಭವನಕ್ಕೆ ತಲುಪಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಲಿಚ್ಚಿ ಕಾರ್ಯಪಡೆಯ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲೆಯ ಕಾಂತಿ, ಮುಶಾರಿ, ಮಿನಾಪುರ ಮತ್ತು ಬೋಚಹಾನ್ ಬ್ಲಾಕ್‌ಗಳ ಹಣ್ಣುಗಳು ಉತ್ತಮವಾಗಿದೆ ಎಂದು ತೋಟಗಾರಿಕೆ ತಂಡವು ಗುರುತಿಸಿದೆ. ಸುಮಾರು 1000 ಲಿಚ್ಚಿ ಬಾಕ್ಸ್‌ಗಳನ್ನು ಬಿಹಾರದಿಂದ ದೆಹಲಿಗೆ ಕಳುಹಿಸಲಾಗುತ್ತದೆ. ಜೂನ್ ಮೊದಲ ವಾರದಲ್ಲಿ ಹಣ್ಣುಗಳು ರಾಷ್ಟ್ರಪತಿ ಭವನ ತಲುಪಲಿವೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ದ್ವಿವೇದಿ ತಿಳಿಸಿದ್ದಾರೆ.
ಇದನ್ನೂ ಓದಿ :'ಬಿಜೆಪಿ ಕಾಂಗ್ರೆಸ್ ಸೋಲಲೇಬೇಕು, ವಾಟಾಳ್ ನಾಗರಾಜ್ ಗೆಲ್ಲಲೇಬೇಕು' : ಹಣ್ಣು ಮಾರಿ ವಾಟಾಳ್ ಮತಬೇಟೆ