Watch Video.. ಮೈಕೋಲೇಔಟ್ ಠಾಣೆಯಲ್ಲಿ ಮಹಿಳಾ ಕಾನ್ಸ್ಟೇಬಲ್ಗೆ ಸೀಮಂತ - ಈಟಿವಿ ಭಾರತ ಕನ್ನಡ
ಬೆಂಗಳೂರು:ಪೊಲೀಸ್ ಠಾಣೆಗಳು ಎಂದರೆ ಕೇವಲ ಅಪರಾಧ ಪ್ರಕರಣಗಳು, ವಿಚಾರಣೆ ಅಂತಾ ಸದಾ ಬ್ಯುಸಿ ಇರುವುದು ಸಹಜ. ಆದರೆ, ಬೆಂಗಳೂರು ನಗರದ ಮೈಕೋಲೇಔಟ್ ಠಾಣೆ ಇವತ್ತು ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಮಹಿಳಾ ಕಾನ್ಸ್ಟೇಬಲ್ ಸೀಮಂತವನ್ನು ಇಡೀ ಠಾಣೆಯ ಸಿಬ್ಬಂದಿ ಸೇರಿ ಆಚರಿಸಿದ್ದಾರೆ.
ಗರ್ಭಿಣಿಗೆ ಕುಟುಂಬಸ್ಥರು ಸೀಮಂತ ಮಾಡುವುದು ಸಾಮಾನ್ಯವಾದರೇ, ಇಲ್ಲಿ ಠಾಣೆಯ ಸಿಬ್ಬಂದಿಯೇ ಸೇರಿ ಸೀಮಂತ ಮಾಡಿರುವುದು ವಿಶೇಷ. ಗಂಗೂಬಾಯಿ ಎಂಬ ಕಾನ್ಸ್ಟೇಬಲ್ ಇನ್ಸ್ಪೆಕ್ಟರ್ ಎಂ.ಎಲ್ ಗಿರೀಶ್ ತಾವೇ ಮುಂದೆ ನಿಂತು ಸೀಮಂತ ಆಯೋಜಿಸಿದ್ದು, ಇದರಲ್ಲಿ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:Watch.. ವೇಸ್ಟೇಜ್ ವಿಚಾರಕ್ಕೆ ಚಿನ್ನ ಬೆಳ್ಳಿ ಆಭರಣ ತಯಾರಕರ ನಡುವೆ ಮಾರಾಮಾರಿ