ಹುಬ್ಬಳ್ಳಿ: ಮಳೆಯಿಂದ ರದ್ದಾದ ಕಲಘಟಗಿ ಪ್ರಜಾಧ್ವನಿ ಕಾರ್ಯಕ್ರಮ - ಈಟಿವಿ ಭಾರತ ಕರ್ನಾಟಕ
ಹುಬ್ಬಳ್ಳಿ:ವಿಧಾನಸಭಾ ಚುನಾವಣೆ ಹಿನ್ನೆಲೆ ಕೈ ಪಾಳೆಯದಲ್ಲಿ ಸಾಕಷ್ಟು ಚಟುವಟಿಕೆಗಳು ಗರಿಗೇದರಿದ್ದು, ಕಲಘಟಗಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಕಾರ್ಯಕ್ರಮ ಮಳೆಯಿಂದಾಗಿ ರದ್ದಾಗಿದೆ. ಸತತ ಒಂದು ಗಂಟೆಯಿಂದ ಬಿಟ್ಟು ಬಿಡದೇ ಸುರಿದ ಮಳೆಯಿಂದ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿದೆ. ಕಲಘಟಗಿಯಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿತ್ತು. ಆದರೆ, ಅಕಾಲಿಕ ಮಳೆಯಿಂದ ಕಾರ್ಯಕ್ರಮ ರದ್ದಾಗಿದೆ.
ಇನ್ನೂ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿನ ಕಾರ್ಯಕ್ರಮಕ್ಕೆ ಸಾವಿರಾರು ಜನರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡಲು ಸಂತೋಷ ಲಾಡ್ ಮುಂದಾಗಿದ್ದರು. ಇದೇ ವೇಳೆ ಮಳೆರಾಯನ ಅಬ್ಬರದಿಂದಾಗಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮರಳಿ ಮನೆಯತ್ತ ಹೆಜ್ಜೆ ಹಾಕುವ ದೃಶ್ಯಗಳು ಕಂಡು ಬಂದವು. ಮತ್ತೆ ಕೆಲ ಕಾರ್ಯಕರ್ತರು ಮಳೆಯಿಂದ ರಕ್ಷಣೆ ಪಡೆಯಲು ಖುರ್ಚಿ ಮೋರೆ ಹೋದರು. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಸಂತೋಷ ಲಾಡ್ ಸೇರಿದಂತೆ ಕಾಂಗ್ರೆಸ್ನ ಹಲವು ಮುಖಂಡರು ಭಾಗವಹಿಸಬೇಕಾಗಿತ್ತು.
ಇದನ್ನೂ ಓದಿ:ನಾಗಮಂಗಲದಲ್ಲಿ ಪ್ರಜಾಧ್ವನಿ ಯಾತ್ರೆ.. ಜೆಡಿಎಸ್ ಭದ್ರಕೋಟೆಯಲ್ಲಿ ಡಿಕೆಶಿ ಅಬ್ಬರದ ಭಾಷಣ