ಕರ್ನಾಟಕ

karnataka

ದೊಡ್ಡಬಳ್ಳಾಪುರ

ETV Bharat / videos

ಡಾ ಬಿ ಆರ್ ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಆರೋಪ.. ಖಾಸಗಿ ವಿವಿ ಪರವಾನಿಗೆ ರದ್ದು ಮಾಡುವಂತೆ ಒತ್ತಾಯ - ಜೈನ್ ಯೂನಿವರ್ಸಿಟಿ ಪರವಾನಗಿ ರದ್ದು

By

Published : Feb 12, 2023, 4:06 PM IST

Updated : Feb 14, 2023, 11:34 AM IST

ದೊಡ್ಡಬಳ್ಳಾಪುರ : ಡಾ ಬಿ ಆರ್ ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಖಾಸಗಿ ವಿವಿಯೊಂದರ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ವಿರುದ್ಧ ಪ್ರಜಾ ವಿಮೋಚನಾ ಸಮಿತಿಯ ವತಿಯಿಂದ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದೇ ವೇಳೆ ವಿಶ್ವವಿದ್ಯಾಲಯದ ಪರವಾನಿಗೆ ರದ್ದು ಮಾಡುವಂತೆ ಒತ್ತಾಯಿಸಲಾಯಿತು.  

ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ಗೂಳ್ಯ ಹನುಮಣ್ಣ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ದಿ ಡೈಲಾಮ್ಸ್ ಬಾಯ್ಸ್', 'ಮ್ಯಾಡ್-ಆಡ್ಸ್' ನ ಭಾಗವಾಗಿ ಫೆಸ್ಟ್‌ನಲ್ಲಿ ಹಾಸ್ಯದ ಜೊತೆಗೆ ದಲಿತರನ್ನು ಗೇಲಿ ಮಾಡಲಾಗಿದೆ‌. ವಿದ್ಯಾರ್ಥಿಗಳ ಗುಂಪೊಂದು ತಾವು ಪ್ರದರ್ಶಿಸಿದ ಸ್ಕಿಟ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್' ಅವರನ್ನು ಅವಮಾನ ಮಾಡಿದ್ದಾರೆ ಮತ್ತು ದಲಿತರ ಬಗ್ಗೆಯೂ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿದರು. 

ಸ್ಕಿಟ್ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮೌನವಾಗಿದೆ. ಸರ್ಕಾರದ ಈ ನಡೆಯನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಈ ಕೂಡಲೇ ಆ ಯೂನಿವರ್ಸಿಟಿಯ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಶೇಖರ್, ದಲಿತ ಮುಖಂಡರಾದ ಮರಿಯಪ್ಪ ಮತ್ತು ಛಲವಾದಿ ಸುರೇಶ್ ಉಪಸ್ಥಿತರಿದ್ದರು.

ಓದಿ :ಗೋಡ್ಸೆ, ಸಾವರ್ಕರ್​ ಬೆಂಬಲಿಗರಿಂದ ನಮಗೆ ಪಾಠ ಬೇಕಿಲ್ಲ: ಅಮಿತ್​ ಶಾಗೆ ಸಿದ್ದರಾಮಯ್ಯ ಟಾಂಗ್​

Last Updated : Feb 14, 2023, 11:34 AM IST

ABOUT THE AUTHOR

...view details