ಬಂಜಾರ ಸಾಂಪ್ರದಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರಭಾ ಮಲ್ಲಿಕಾರ್ಜುನ್ - ವಿಡಿಯೋ - ಬಂಜಾರ ಸಂಪ್ರಾದಯ ನೃತ್ಯ
Published : Sep 9, 2023, 9:37 PM IST
ದಾವಣಗೆರೆ: ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ದಾವಣಗೆರೆ ತಾಲೂಕಿನ ದೊಡ್ಡ ಓಬ್ಬಜ್ಜಿಹಳ್ಳಿಯಲ್ಲಿ ನಡೆದ ಬಂಜಾರ ಸಮುದಾಯದವರ ಹಬ್ಬದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿದ್ದರು. ಈ ವೇಳೆ, ಬಂಜಾರ ಸಮುದಾಯದ ಉಡುಗೆ ತೊಟ್ಟು, ಬಂಜಾರ ಮಹಿಳೆಯರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಇಲ್ಲಿ ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬಂಜಾರ ಸಮುದಾಯ ಸಡಗರದಿಂದ ಹಬ್ಬ ಆಚರಿಸುತ್ತಾ ಬರುತ್ತಿದೆ.
ಈ ಹಬ್ಬಕ್ಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಅತಿಥಿಯಾಗಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮದ ಮಹಿಳೆಯರು ಪ್ರಭಾ ಅವರಿಗೆ ಬಂಜಾರು ಉಡುಗೆ ತೊಡಿಸಿದರು. ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಗ್ರಾಮದಲ್ಲಿ ಕೃಷ್ಣ ದೇವರು ಮೂರ್ತಿ ಹಿಡಿದು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಪ್ರಭಾ ಮಲ್ಲಿಕಾರ್ಜುನ್ ಅವರು ಬಂಜಾರ ಸಮುದಾಯದ ಸಾಂಪ್ರದಾಯಿಕ ನೃತ್ಯ ಮಾಡಿದರು. ಪ್ರಭಾ ಅವರಿಗೆ ಅಲ್ಲಿದ್ದ ಮಹಿಳೆಯರು ನೃತ್ಯ ಹೇಳಿ ಕೊಟ್ಟರು, ಇನ್ನು ಮಹಿಳೆಯರ ಜೊತೆ ಹೆಜ್ಜೆ ಹಾಕಿ ಪ್ರಭಾ ಅವರು ಖುಷಿಪಟ್ಟರು. ಲಂಬಾಣಿ ಸಮುದಾಯದ ಯುವತಿಯರು ಕೂಡ ಪ್ರಭಾ ಮಲ್ಲಿಕಾರ್ಜುನ್ ರವರೊಂದಿಗೆ ಬಂಜಾರ ಹಾಡಿಗೆ ಕುಣಿದರು. ಯುವಕರು ನಾವೇನು ಕಮ್ಮಿ ಇಲ್ಲ ಎಂದು ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಗಣೇಶ ಹಬ್ಬ ಆಚರಣೆ: ಬಿಬಿಎಂಪಿಯಿಂದ ಪಿಒಪಿ ಮೂರ್ತಿ ನಿಷೇಧ ಸೇರಿ ಹಲವು ರೂಲ್ಸ್