ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ವರ್ಕ್ ಔಟ್ ವಿಡಿಯೋ ವೈರಲ್ - ಪಿಆರ್ಕೆ ಪ್ರೊಡಕ್ಷನ್ಸ್ ಸಂಸ್ಥೆ
ಬೆಂಗಳೂರು: ಅಪ್ಪು ಅಗಲಿಕೆಯ ನಂತರ ಅವರ ಸಿನಿಮಾ ಸಂಸ್ಥೆಯ ಜವಾಬ್ದಾರಿ ಹೊತ್ತವರು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್. ಅಪ್ಪುವಿನ ಹಾದಿಯಲ್ಲಿ ಸಾಗುತ್ತಿರುವ ಇವರೂ ಕೂಡಾ ಫಿಟ್ನೆಸ್‌ಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸಿನಿಮಾದ ಟ್ರೇಲರ್, ಆಡಿಯೋ ಬಿಡುಗಡೆ ಅಂತೆಲ್ಲ ಹೊಸ ಪ್ರತಿಭೆಗಳ ಚಿತ್ರಕ್ಕೆ ಸಪೋರ್ಟ್ ಮಾಡ್ತಾ, ಪ್ರೊಡಕ್ಷನ್ ಹೌಸ್ ಕೆಲಸಗಳು, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ಇದೀಗ ಇವರು ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಪುನೀತ್ ರಾಜ್‍ಕುಮಾರ್ ಬದುಕಿದ್ದಾಗ ಅಶ್ವಿನಿಯವರ ಜೊತೆಗೆ ಸಿನಿಮಾ, ಟ್ರೆಕ್ಕಿಂಗ್, ಅಡ್ವೆಂಚರ್, ಯೋಗ ಮತ್ತು ವರ್ಕ್ ಔಟ್ ಅಂತಾ ಬ್ಯುಸಿ ಇರುತ್ತಿದ್ದರು. ಇದೀಗ ಮಕ್ಕಳಾದ ಧೃತಿ ಹಾಗೂ ವಂದಿತಾ ಜೀವನದ ಬಗ್ಗೆ ಹಾಗೂ ಪಿಆರ್ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ನಿಭಾಯಿಸಲು ಅಶ್ವಿನಿ ತಮ್ಮನ್ನು ತಾವೇ ಮೋಟಿವೇಟ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಟೀಸರ್ ಬಿಡುಗಡೆಗೂ ಮುನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡ 'ಮಾರ್ಟಿನ್'