'ಸಾಕಪ್ಪಾ ಸಾಕು-ಕಿವಿ ಮೇಲೆ ಹೂವ' : ಮಂಗಳೂರಿನಲ್ಲಿ ಬಿಜೆಪಿ ಬ್ಯಾನರ್ ಮೇಲೆ ಕಾಂಗ್ರೆಸ್ ಪೋಸ್ಟರ್ - basavaraja bommai
ಮಂಗಳೂರು: ನಗರದಲ್ಲಿ 'ಬಿಜೆಪಿಯೇ ಭರವಸೆ' ಎಂಬ ಪೋಸ್ಟರ್ ಮೇಲೆಯೇ 'ಸಾಕಪ್ಪಾ ಸಾಕು ಕಿವಿ ಮೇಲೆ ಹೂವ' ಎಂಬ ಪೋಸ್ಟರ್ ಹಾಕಲಾಗಿದೆ. ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿವಿಯ ಮೇಲೆ ಹೂವು ಇಟ್ಟುಕೊಂಡು ಬಂದು ರಾಜ್ಯ ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದರು.
ಇದರ ಬೆನ್ನಿಗೆ ಇದೀಗ ಮಂಗಳೂರಿನಲ್ಲಿ ಬಿಜೆಪಿ ತನ್ನ ಪ್ರಚಾರಕ್ಕೆ ಮಾಡಿರುವ ಬ್ಯಾನರ್ ಮೇಲೆ ಕಿವಿ ಮೇಲೆ ಹೂವು ಇಟ್ಟುಕೊಂಡಿರುವ ಪೋಸ್ಟರ್ ಬಂದಿದೆ. ಬಿಜೆಪಿ ಹಾಕಿರುವ ಬ್ಯಾನರ್ ಮೇಲೆಯೇ ಮತ್ತೊಂದು ಪೋಸ್ಟರ್ ಅಂಟಿಸಲಾಗಿದೆ. ಇದು ಕಾಂಗ್ರೆಸ್-ಬಿಜೆಪಿ ಪೋಸ್ಟರ್ ವಾರ್ಗೆ ನಾಂದಿಯಾಗಿದೆ. 'ಬಿಜೆಪಿಯೇ ಭರವಸೆ' ಎಂಬ ಪೋಸ್ಟರ್ ಮೇಲೆ ಬುರುಡೆ ಭರವಸೆ ಸಾಕು, ಕಿವಿ ಮೇಲೆ ಹೂವ', ಸಾಕಪ್ಪಾ ಸಾಕು ಕಿವಿ ಮೇಲೆ ಹೂವ' ಎಂಬ ಪೋಸ್ಟರ್ ಅಂಟಿಸಲಾಗಿದೆ. ನಗರದ ನಂತೂರು, ಬಿಕರ್ನಕಟ್ಟೆ, ಕೋರ್ಟ್ ರಸ್ತೆ ಸೇರಿದಂತೆ ಮೊದಲಾದೆಡೆ ಬ್ಯಾನರ್ ಮೇಲೆ ಪೋಸ್ಟರ್ ಅಂಟಿಸಿರುವುದ ಕಂಡು ಬಂದಿದೆ.
ಇದನ್ನೂ ಓದಿ:ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ 'ಶಿಕ್ಷಾ' ರೋಬೋ