ಬಾವಿ ಕಟ್ಟೆಯ ಮೇಲೆ ಕ್ಯಾಟ್ಗಳ ಬಿಗ್ ಫೈಟ್.. ನೀರಿಗೆ ಬಿದ್ದ ಬೆಕ್ಕು ರಕ್ಷಣೆಗೆ ಬಂತು ಪೊಲೀಸ್ ತಂಡ! - ತೆಲಂಗಾಣದಲ್ಲಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಪೊಲೀಸರು
ತೆಲಂಗಾಣದ ಕರೀಂನಗರದ ಜಿಲ್ಲಾಸ್ಪತ್ರೆ ಬಳಿಯ ಬಾವಿಗೆ ಬಿದ್ದಿದ್ದ ಬೆಕ್ಕೊಂದನ್ನು ಪೊಲೀಸ್ ಇಲಾಖೆ ರಕ್ಷಿಸಿದೆ. ಬಾವಿಯ ಕಟ್ಟೆಯ ಮೇಲೆ ಎರಡು ಬೆಕ್ಕುಗಳು ಹೊಡೆದಾಡಿಕೊಂಡಿವೆ. ಈ ವೇಳೆ ಬೆಕ್ಕೊಂದು ಬಾವಿಗೆ ಬಿದ್ದಿದೆ. ಇದನ್ನು ಕಂಡ ಬಾಲಕಿಯೊಬ್ಬಳು ಬೆಕ್ಕನ್ನು ರಕ್ಷಿಸಲು ತನ್ನ ತಂದೆಯನ್ನು ಕರೆದಿದ್ದಾಳೆ. ತಂದೆ ಮತ್ತು ಮಗಳು ಬೆಕ್ಕನ್ನು ಉಳಿಸಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ನಗರ ಆಯುಕ್ತರು ಮತ್ತು ಅಗ್ನಿಶಾಮಕ ದಳವನ್ನು ಸಂಪರ್ಕಿಸಿದರು. ಮಧ್ಯರಾತ್ರಿ 12.30ಕ್ಕೆ ಸ್ಥಳಕ್ಕೆ ಎರಡು ಇಲಾಖೆಗಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬುಟ್ಟಿಯನ್ನು ಬಾವಿಗೆ ಇಳಿಸಿ ಬೆಕ್ಕನ್ನು ರಕ್ಷಿಸಿದರು. ಮಧ್ಯರಾತ್ರಿಯಲ್ಲಿ ತಮ್ಮ ಕರೆಗೆ ಸ್ಪಂದಿಸಿದ್ದಕ್ಕಾಗಿ ಮತ್ತು ಬೆಕ್ಕನ್ನು ರಕ್ಷಿಸಿದ್ದಕ್ಕಾಗಿ ತಂದೆ ಮತ್ತು ಮಗಳು ಎಸಿಪಿ ಮತ್ತು ಸಿಪಿಗೆ ಧನ್ಯವಾದ ಅರ್ಪಿಸಿದರು.
Last Updated : Feb 3, 2023, 8:24 PM IST