ಕರ್ನಾಟಕ

karnataka

IPL ಟಿಕೆಟ್​ ಲಭ್ಯವಿದೆ ಎಂದು ನಕಲಿ ಪೋಸ್ಟ್ ವೈರಲ್: ಟಿಕೆಟಿಗಾಗಿ ಮುಗಿಬಿದ್ದ ಅಭಿಮಾನಿಗಳನ್ನ ನಿಯಂತ್ರಿಸಲು ಲಾಠಿ‌ ಪ್ರಹಾರ

ETV Bharat / videos

IPL ಟಿಕೆಟ್​ ಬಗ್ಗೆ ನಕಲಿ ಪೋಸ್ಟ್: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ‌ ಏಟು - ಈಟಿವಿ ಭಾರತ ಕರ್ನಾಟಕ

By

Published : Apr 16, 2023, 5:15 PM IST

ಬೆಂಗಳೂರು:ಐಪಿಎಲ್ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ ಘಟನೆ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದೆ. ನಾಳೆ(ಸೋಮವಾರ) ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದ ಟಿಕೆಟ್ ಇಂದು ಲಭ್ಯವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿತ್ತು. ಇದನ್ನು ನಂಬಿ ಟಿಕೆಟ್ ಖರೀದಿಸಲು ರಾತ್ರಿಯಿಂದಲೇ ಬಂದು ಕಾದು ನಿಂತ ಅಭಿಮಾನಿಗಳಿಗೆ ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದು ಗೊತ್ತಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಉಂಟಾದ ಬಿಗುವಿನ ವಾತಾವರಣ ನಿಯಂತ್ರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದರು. ಟಿಕೆಟ್ ಸಿಗದ ಅಭಿಮಾನಿಗಳು ನಿರಾಶೆಯಿಂದಲೇ ವಾಪಸಾಗಿದ್ದಾರೆ.

ಮುಂಬರುವ ರಾಜಸ್ಥಾನ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್‌ 16 ಮತ್ತು ಏಪ್ರಿಲ್ 21ರಂದು, ಕೋಲ್ಕತ್ತಾ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 18 ಮತ್ತು ಏಪ್ರಿಲ್ 24ರಂದು ಮತ್ತು ಗುಜರಾತ್ ವಿರುದ್ಧದ ಲೀಗ್‌ನ ಕೊನೆಯ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 24 ಮತ್ತು ಮೇ 19ರಂದು ಅವಕಾಶವಿದ್ದು ಸ್ಟೇಡಿಯಂನ ಗೇಟ್ ನಂ 18 ಮತ್ತು 19ರಲ್ಲಿ‌ ಅಭಿಮಾನಿಗಳು ನೇರವಾಗಿ ಟಿಕೆಟ್ ಖರೀದಿಸಲು ಅವಕಾಶವಿದೆ ಎಂದು ಆರ್​ಸಿಬಿ ತಂಡದ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ:ಡೆಲ್ಲಿ ವಿರುದ್ಧ ಆರ್​ಸಿಬಿಗೆ ಗೆಲುವು.. ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ 2500 ರನ್ ದಾಖಲೆ​

ABOUT THE AUTHOR

...view details