ಮಕ್ಕಳ ಕಳ್ಳರ ವದಂತಿ.. ಪೊಲೀಸರಿಗೆ ನಾಲ್ವರನ್ನು ಹಿಡಿದುಕೊಟ್ಟ ವಿಜಯಪುರ ಜನತೆ - ಮಕ್ಕಳ ಕಳ್ಳರು ಅರೆಸ್ಟ್
ವಿಜಯಪುರ: ನಗರದಲ್ಲಿ ಮಕ್ಕಳ ಕಳ್ಳರು ಇರುವ ವಂದತಿ ಹಿನ್ನೆಲೆ ಮತ್ತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದ ಸ್ಯಾಟ್ಲೈಟ್ ಬಳಿ ನಡೆದಿದೆ. ದೆಹಲಿ ಮೂಲದ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಲ್ವರು ಹೂವು ಮಾರಾಟಗಾರರಾಗಿದ್ದರು. ಸ್ಯಾಟ್ಲೈಟ್ ಬಸ್ ನಿಲ್ದಾಣದಲ್ಲಿ ಮಕ್ಕಳ ಕಳ್ಳತನಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಸ್ಥಳೀಯರೇ ಹಿಡಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Last Updated : Feb 3, 2023, 8:28 PM IST