ಮಣಿಪುರದಲ್ಲಿ ಉಗ್ರಗಾಮಿಗಳ ದಾಳಿ: ಓರ್ವ ಪೊಲೀಸ್ ಹುತಾತ್ಮ, ನಾಲ್ವರಿಗೆ ಗಾಯ - ಪ್ಯಾರಾಮಿಲಿಟರಿ ಪಡೆ
ಚುರಾಚಂದಪುರ (ಮಣಿಪುರ): ಬಿಷ್ಣುಪುರ ಪೊಲೀಸ್ ಕಮಾಂಡೋ ಮೇಲೆ ಕುಕಿ ಉಗ್ರಗಾಮಿಗಳು ದಾಳಿ ನಡೆಸಿದ್ದು, ಪೊಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ. ಅಲ್ಲದೆ 4 ಮಂದಿ ಗಾಯಗೊಂಡಿದ್ದಾರೆ. ಟೋರ್ಬಂಗ್ ಬಾಂಗ್ಲಾದಲ್ಲಿ ಕುಕಿ ಉಗ್ರಗಾಮಿಗಳು ಕೆಲವು ನಾಗರಿಕರನ್ನು ಅಪಹರಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಬಿಷ್ಣುಪುರ ಪೊಲೀಸ್ ಕಮಾಂಡೋ ದೊಡ್ಡಾನಂದ ಅವರು ಪ್ರತಿಕ್ರಿಯಿಸಿದ್ದು, ''ದಿನನಿತ್ಯದಂತೆ ನಮ್ಮ ಸಿಬ್ಬಂದಿ ಬೆಳಗ್ಗೆ 6 ಗಂಟೆ ಸಮಯದಲ್ಲಿ ಟಿ ಮೊಲ್ಕೋಟ್ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದಾಗ ಉಗ್ರಗಾಮಿ ಗುಂಪು ತಂಡದ ಮೇಲೆ ಹೊಂಚು ದಾಳಿ ನಡೆಸಿದೆ'' ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯರಸ್ತೆಯಲ್ಲಿ ಗಸ್ತಿನಲ್ಲಿರುವ ಪ್ಯಾರಾಮಿಲಿಟರಿ ಪಡೆ: ''ನಾವು ಘಟನಾ ಸ್ಥಳಕ್ಕೆ ತಲುಪುವ ಮುನ್ನವೇ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು ಮತ್ತು ಒಬ್ಬರು ಹುತಾತ್ಮರಾಗಿದ್ದರು. ಪ್ಯಾರಾ ಮಿಲಿಟರಿ ಪಡೆ ಮುಖ್ಯರಸ್ತೆಯಲ್ಲಿ ಗಸ್ತು ತಿರುಗುತ್ತಿದೆ. ಘಟನಾ ಸ್ಥಳಕ್ಕೆ ಬರಲಿಲ್ಲ. ಆದರೆ ಗುಂಡಿನ ದಾಳಿ ನಂತರ ಅವರು ನಮ್ಮ ಪೊಲೀಸ್ ಸಿಬ್ಬಂದಿಯನ್ನು ಹೊರತೆಗೆಯಲು ನಮಗೆ ಸಹಾಯ ಮಾಡಿದರು'' ಎಂದು ತಿಳಿಸಿದ್ದಾರೆ.