ಕರ್ನಾಟಕ

karnataka

ETV Bharat / videos

ದೆಹಲಿಯಲ್ಲಿ ಮೋದಿ ರೋಡ್​ ಶೋ.. ಎರಡು ದಿನದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಭರ್ಜರಿ ಎಂಟ್ರಿ - ETV Bharath Kannada news

By

Published : Jan 16, 2023, 9:11 PM IST

Updated : Feb 3, 2023, 8:39 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಕ್ಷವು ಈ ವರ್ಷ ಎದುರಿಸಲಿರುವ ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಕಾರ್ಯತಂತ್ರಗಳನ್ನು ರೂಪಿಸಲಿದೆ ಎನ್ನಲಾಗಿದೆ. ಸಭೆಗೆ ತೆರಳುವ ಮೊದಲು ಮೋದಿ ದೆಹಲಿಯಲ್ಲಿ ಮೆಗಾ ರೋಡ್‌ಶೋ ನಡೆಸಿದರು. ರಸ್ತೆ ಉದ್ದಕ್ಕೂ ಕಿಕ್ಕಿರಿದ ಜನ ಮೋದಿ ಮೋದಿ ಎಂದು ಉದ್ಘೋಷಿಸಿದರು. ಎರಡು ದಿನ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಪಕ್ಷವು ಮುಂದಿನ ಚುನಾವಣೆಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳಲಿದೆ. 
 

2024ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಈ ವರ್ಷ ನಡೆಯಲಿರುವ ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯ ಮಹತ್ವವನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕಾರ್ಯಕಾರಿಣಿಲ್ಲಿ ಸೋಮವಾರ ಒತ್ತಿ ಹೇಳಿದ್ದಾರೆ. ಯಾವುದೇ ರಾಜ್ಯದಲ್ಲೂ ಸೋಲದಂತೆ ನೋಡಿಕೊಳ್ಳುವಂತೆ ಪಕ್ಷದ ಎಲ್ಲ ರಾಜ್ಯಗಳ ನಾಯಕರಿಗೆ ನಡ್ಡಾ ಇದೇ ವೇಳೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ನಾನೂ ಮಧ್ಯಮ ವರ್ಗದವಳು, ಅವರ ಕಷ್ಟ ಅರ್ಥವಾಗುತ್ತೆ: ವಿತ್ತ ಸಚಿವೆ ಸೀತಾರಾಮನ್

Last Updated : Feb 3, 2023, 8:39 PM IST

ABOUT THE AUTHOR

...view details