ಕರ್ನಾಟಕ

karnataka

ಪ್ರಧಾನಿ ಮೋದಿ

ETV Bharat / videos

ಅಧಿವೇಶನ ಕೆಲವೇ ದಿನ ನಡೆಯಬಹುದು, ಆದ್ರೆ ಐತಿಹಾಸಿಕ ವ್ಯಾಪ್ತಿ ಹೊಂದಿದೆ: ಮೋದಿ - ಪ್ರಧಾನಮಂತ್ರಿ ನರೇಂದ್ರ ಮೋದಿ

By ETV Bharat Karnataka Team

Published : Sep 18, 2023, 11:37 AM IST

ನವದೆಹಲಿ:ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಆರಂಭಕ್ಕೂ ಮುನ್ನ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸತ್ ಭವನದ ಮುಂದೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಜಿ20 ಶೃಂಗಸಭೆ ಮತ್ತು ಚಂದ್ರಯಾನ-3ರ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದರು. ಜಿ20 ಶೃಂಗಸಭೆಯಲ್ಲಿ ನಾವು ಜಾಗತಿಕ ದಕ್ಷಿಣದ (Global South) ಧ್ವನಿಯಾಗಿದ್ದು, ಇದು ಭಾರತ ಗರ್ವಪಡುವ ವಿಷಯ ಎಂದರು.

ಜಿ20ಗೆ ಆಫ್ರಿಕನ್ ಒಕ್ಕೂಟದ ಶಾಶ್ವತ ಸದಸ್ಯತ್ವ ಮತ್ತು ಸರ್ವಾನುಮತದ ದೆಹಲಿ ಘೋಷಣೆ ಈ ಎಲ್ಲಾ ವಿಷಯಗಳು ಭಾರತದ ಉಜ್ವಲ ಭವಿಷ್ಯದ ಸಂಕೇತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾನುವಾರ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ 'ಯಶೋಭೂಮಿ'ಯನ್ನು ದೇಶಕ್ಕೆ ಅರ್ಪಿಸಲಾಗಿದೆ ಎಂದರು. ಇದೇ ವೇಳೆ ಚಂದ್ರಯಾನ-3ರ ಬಗ್ಗೆ ಮಾತನಾಡಿದ ಪ್ರಧಾನಿ, ಚಂದ್ರಯಾನ3 ಯಶಸ್ಸಿನಿಂದ ಚಂದ್ರನ ಮೇಲೆ ನಮ್ಮ ರಾಷ್ಟ್ರೀಯ ಧ್ವಜ ಹಾರಾಡುತ್ತಿದೆ. ವಿಕ್ರಮ್​ ಲ್ಯಾಂಡರ್​ ಇಳಿದ ಶಿವಶಕ್ತಿ ಪಾಯಿಂಟ್ ಹೊಸ ಸ್ಪೂರ್ತಿಯ ಕೇಂದ್ರವಾಗಿದೆ. 

ವಿಶೇಷ ಅಧಿವೇಶನದ ಬಗ್ಗೆ ಮಾತನಾಡುತ್ತಾ, ಅಧಿವೇಶನ ಕೆಲವೇ ದಿನ ನಡೆಯಬಹುದು, ಆದ್ರೆ ಐತಿಹಾಸಿಕ ವ್ಯಾಪ್ತಿ ಹೊಂದಿದೆ. 75 ವರ್ಷಗಳ ಪ್ರಯಾಣ ಇನ್ನು ಮುಂದೆ ಹೊಸ ಸ್ಥಳದಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದರು. 

ಇದನ್ನೂ ಓದಿ:ಇಂದಿನಿಂದ ವಿಶೇಷ ಅಧಿವೇಶನ: ಹಳೆ ಕಟ್ಟಡದಲ್ಲಿ ಮೊದಲ ದಿನದ ಕಲಾಪ, ನಾಳೆಯಿಂದ ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌

ABOUT THE AUTHOR

...view details