ಕರ್ನಾಟಕ

karnataka

ರಾಜ್​ಕೋಟ್​ ವಿಮಾನ ನಿಲ್ದಾಣದ ಗ್ರೀನ್​ ಫೀಲ್ಡ್​ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ: ವಿಡಿಯೋ

By

Published : Jul 27, 2023, 5:48 PM IST

ಗ್ರೀನ್​ ಫೀಲ್ಡ್​ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ

ರಾಜ್​ಕೋಟ್​​ (ಗುಜರಾತ್​) : ಗುಜರಾತ್​ಗೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್​ಕೋಟ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಟರ್ಮಿನಲ್​ ಅನ್ನು ಗುರುವಾರ ಲೋಕಾರ್ಪಣೆ ಮಾಡಿದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೊಸ ಟರ್ಮಿನಲ್​ನ ಸೌಲಭ್ಯಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.

ವಿಮಾನ ನಿಲ್ದಾಣದ ಹೊಸ ಟರ್ಮಿನಲ್​ ಅನ್ನು 2,500 ಎಕರೆ ಪ್ರದೇಶದಲ್ಲಿ 1400 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಸುಸ್ಥಿರ ವೈಶಿಷ್ಟ್ಯಗಳ ಸಂಯೋಜನೆಯನ್ನು ಇದು ಹೊಂದಿದೆ. ಟರ್ಮಿನಲ್ ಕಟ್ಟಡವು ʻಜಿಆರ್‌ಐಎಚ್‌ಎʼ-4 (ಇಂಟಿಗ್ರೇಟೆಡ್ ಹ್ಯಾಬಿಟೇಟ್ ಅಸೆಸ್ಮೆಂಟ್​ ಗ್ರೀನ್ ರೇಟಿಂಗ್), ಡಬಲ್ ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಸ್ಕೈಲೈಟ್‌ಗಳು, ಎಲ್ಇಡಿ ಲೈಟಿಂಗ್, ಲೋ ಹೀಟ್ ಗೇನ್ ಗ್ಲೇಸಿಂಗ್ ಸೇರಿದಂತೆ ವಿವಿಧ ಸುಸ್ಥಿರ ವೈಶಿಷ್ಟ್ಯಗಳನ್ನು ಹೊಂದಿದೆ. ಗುರುವಾರದಿಂದ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಮೋದಿ ಅವರು ಹಲವು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ರಾಜಸ್ಥಾನಕ್ಕೆ ಭೇಟಿ ನೀಡಿ, ಗೆಹ್ಲೋಟ್​ ಸರ್ಕಾರವನ್ನು ಟೀಕಿಸಿದ್ದರು. ರೆಡ್​ ಡೈರಿ ಸರ್ಕಾರಕ್ಕೆ ಪತನದ ಕರೆ ಗಂಟೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ;ಕೆಂಪು ಡೈರಿ ಕಾಂಗ್ರೆಸ್‌ ಪಕ್ಷದ ಸೋಲಿನ ಕರೆ ಗಂಟೆ: ರಾಜಸ್ಥಾನದ ಭವಿಷ್ಯ ನುಡಿದ ಪ್ರಧಾನಿ ಮೋದಿ

ABOUT THE AUTHOR

...view details