ದೇಶ ಸೇವೆಯ ಯೋಧರಿಗೆ ಕೈಯ್ಯಾರೆ ದೀಪಾವಳಿ ಸಿಹಿ ತಿನ್ನಿಸಿದ ಮೋದಿ: ವಿಡಿಯೋ - ಮೋದಿಗಾಗಿ ಹಾಡಿದ ಗುಜರಾತ್ ಯೋಧರು
ಕೇಂದ್ರಾಡಳಿತ ಪ್ರದೇಶ ಲಡಾಖ್ನ ಕಾರ್ಗಿಲ್ಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯೋಧರ ಜೊತೆಗೆ ದೀಪಾವಳಿ ಹಬ್ಬ ಆಚರಿಸಿದರು. ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಯೋಧರು ಹಾಡು ಹಾಡಿ ಸಂಭ್ರಮಿಸಿದರು. ತಮಿಳುನಾಡು ಯೋಧರು ಪ್ರಧಾನಿ ಅವರನ್ನು ವಿಶೇಷವಾಗಿ ಗೌರವಿಸಿದ್ದು ಗಮನ ಸೆಳೆಯಿತು. ತಮಿಳು ಹಾಡೊಂದನ್ನು ಹಾಡಿ ಮೋದಿ ಅವರನ್ನು ಹೊಗಳಿಸಿದರು. ಹಬ್ಬದ ಸಿಹಿಯನ್ನು ಯೋಧರಿಗೆ ಮೋದಿ ಕೈಯ್ಯಾರೆ ತಿನ್ನಿಸಿದರು. ಯೋಧರ ಈ ಗೌರವವನ್ನು ಮೋದಿ ಟ್ವೀಟ್ನಲ್ಲಿ ಹಂಚಿಕೊಂಡಿದ್ದು, ಇದು ನನ್ನನ್ನು ಆಕರ್ಷಿಸಿತು ಎಂದು ಹೇಳಿದ್ದಾರೆ. ಗುಜರಾತ್ ಯೋಧರೂ ಕೂಡ ಪ್ರಧಾನಿಗಾಗಿ ಹಾಡು ಹಾಡಿದ್ದಾರೆ.
Last Updated : Feb 3, 2023, 8:30 PM IST