ಅಹಮದಾಬಾದ್: ದುರ್ಗಾ ದೇವಿಗೆ ಪೂಜೆ ಸಲ್ಲಿಸಿ ಗರ್ಭಾ ನೃತ್ಯ ವೀಕ್ಷಿಸಿದ ಪ್ರಧಾನಿ.. - ಗಾರ್ಬಾ ನೃತ್ಯ ವೀಕ್ಷಿಸಿದ ಪ್ರಧಾನಿ
ಅಹಮದಾಬಾದ್: ಎರಡುದಿನಗಳ ಕಾಲ ಗುಜುರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ನಿನ್ನೆ ಸಂಜೆ ನಗರದ ಜಿಎಂಡಿಸಿ ಮೈದಾನಕ್ಕೆ ತೆರಳಿ ಅಲ್ಲಿ ಪ್ರತಿಷ್ಠಾಪಿಸಲಾಗಿರುವ ದುರ್ಗಾ ಮಾತೆಗೆ ಆರತಿ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗರ್ಭಾ ನೃತ್ಯವನ್ನ ವೀಕ್ಷಿಸಿದರು. ಕಾರ್ಯಕ್ರಮದ ಬಳಿಕ ಗರ್ಭಾ ನೃತ್ಯಗಾರರು ಪ್ರಧಾನಿ ಅವರೊಂದಿಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತ ಪಡಿಸಿದರು. ಇನ್ನು ಪ್ರತಿ ವರ್ಷ ದಸರಾದಂದು ಮೋದಿಯವರು ಇಲ್ಲಿಗೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸುವುದು ವಿಶೇಷ.
Last Updated : Feb 3, 2023, 8:28 PM IST