PM Modi: 'ಸುಳ್ಳಿನ ಬಜಾರಿನಲ್ಲಿ ಲೂಟಿಯ ಅಂಗಡಿ': ರಾಹುಲ್ 'ಮೊಹಬ್ಬತ್ ಕಿ ದುಕಾನ್'ಗೆ ಮೋದಿ ಟಾಂಗ್- ವಿಡಿಯೋ - ಸುಳ್ಳಿನ ಬಜಾರಿನಲ್ಲಿ ಲೂಟಿಯ ಅಂಗಡಿ
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ''ಕಾಂಗ್ರೆಸ್ನವರು ಹಲವು ವರ್ಷಗಳಿಂದ ವಿಫಲವಾದ ಉತ್ಪನ್ನವನ್ನೇ ಮತ್ತೆ ಮತ್ತೆ ಹೊರ ಹಾಕುತ್ತಿದ್ದಾರೆ. ಆದರೆ, ಅದು ವಿಫಲವಾಗುತ್ತಿದೆ'' ಎಂದು ವ್ಯಂಗ್ಯವಾಡಿದರು.
ಮಣಿಪುರ ಹಿಂಸಾಚಾರ ವಿಷಯವಾಗಿ ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸುದೀರ್ಘವಾಗಿ ಉತ್ತರಿಸಿದ ಅವರು, ಕಾಂಗ್ರೆಸ್ ಹಾಗೂ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ''ಕಾಂಗ್ರೆಸ್‌ನ ಸಂಕಷ್ಟ ನನಗೆ ಅರ್ಥವಾಗುತ್ತದೆ. ವರ್ಷಗಳಿಂದ ಅವರು ವಿಫಲವಾದ ಉತ್ಪನ್ನವನ್ನೇ ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ. ಅದನ್ನು ಉಡಾವಣೆ ಮಾಡಿದಾಗ ಪ್ರತಿ ಬಾರಿಯೂ ವಿಫಲಗೊಳ್ಳುತ್ತಿದೆ. ಹೀಗಾಗಿ ಮತದಾರರ ಮೇಲೆ ಕಾಂಗ್ರೆಸ್ ದ್ವೇಷ ಉತ್ತುಂಗಕ್ಕೇರಿದೆ'' ಎಂದರು.
''ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ)" ಎಂದು ಕಾಂಗ್ರೆಸ್ನವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ದೇಶದ ಜನರು ಅವರನ್ನು 'ಲೂಟ್ ಕಿ ದುಕಾನ್, ಝೂಟ್ ಕಾ ಬಜಾರ್' (ಸುಳ್ಳಿನ ಬಜಾರಿನಲ್ಲಿ ಲೂಟಿಯ ಅಂಗಡಿ) ಎಂದು ಹೇಳುತ್ತಿದ್ದಾರೆ'' ಎಂದು ವಾಗ್ಬಾಣ ಬಿಟ್ಟರು. ಅಲ್ಲದೇ, ''ಕಳೆದ ಮೂರು ದಿನಗಳಲ್ಲಿ ಪ್ರತಿಪಕ್ಷಗಳು ನನ್ನ ವಿರುದ್ಧ ಡಿಕ್ಷನರಿಯಿಂದ ಪದಗಳನ್ನು ಹುಡುಕಿ ನಿಂದಿಸುತ್ತಿದ್ದಾರೆ. ಆದರೆ, ಆ ನಿಂದನೆಗಳನ್ನೇ ನಾನು ಟಾನಿಕ್ ಮಾಡಿಕೊಂಡಿದ್ದೇನೆ" ಎಂದು ಪ್ರಧಾನಿ ಮೋದಿ ತಿಳಿಸಿದರು.
ಇದನ್ನೂ ಓದಿ:PM Modi: ಅವಿಶ್ವಾಸ ನಿರ್ಣಯ ನಮಗೆ ಅದೃಷ್ಟ; 2024ರಲ್ಲಿ NDA ಎಲ್ಲ ದಾಖಲೆ ಮುರಿಯಲಿದೆ-ಲೋಕಸಭೆಯಲ್ಲಿ ಪ್ರಧಾನಿ ಮೋದಿ