ಬೆಳಗಾವಿಯಲ್ಲಿ ಪ್ರಧಾನಿ ರೋಡ್ ಶೋ.. ರಸ್ತೆಯುದ್ದಕ್ಕೂ ಮೋದಿಗೆ ಪುಷ್ಪವೃಷ್ಟಿ
ಬೆಳಗಾವಿ :ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬೃಹತ್ ರೋಡ್ ಶೋ ನಡೆಸಿದರು. ನಗರದ ಕೆಎಸ್ಆರ್‌ಪಿ ಮೈದಾನದಿಂದ ಆರಂಭಗೊಂಡ ರೋಡ್ ಶೋ ಯಡಿಯೂರಪ್ಪ ಮಾರ್ಗವಾಗಿ ಸುಮಾರು ಹತ್ತು ಕಿಲೋಮೀಟರ್ ಸಾಗಿತು. ನೆಚ್ಚಿನ ಪ್ರಧಾನಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
ರೋಡ್ ಶೋದಲ್ಲಿ ಕೇಸರಿ ಮತ್ತು ಬಿಜೆಪಿ ಧ್ವಜಗಳು ರಾರಾಜಿಸುತ್ತಿದ್ದವು. ಎಲ್ಲೆಡೆ ಮೋದಿ ಮೋದಿ ಎಂಬ ಜಯಘೋಷ ಮೊಳಗುತ್ತಿತ್ತು. ಕೇಸರಿ ಪೇಟ ತೊಟ್ಟ ಮಹಿಳಾ ಮಣಿಗಳು ಹರಹರ ಮೋದಿ ಎಂದು ಜೈಕಾರ ಕೂಗಿದರು. ರೋಡ್ ಶೋ ಉದ್ದಕ್ಕೂ ಮೋದಿಗೆ ಪುಷ್ಪ ವೃಷ್ಟಿ ಸುರಿಸಲಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್ ಶೋ ನಡೆಯಿತು.
ಇದನ್ನೂ ಓದಿ : ಬೆಳಗಾವಿಯಲ್ಲಿ ಪ್ರಧಾನಿಗೆ ಕಾಯಕಯೋಗಿಗಳಿಂದ ಸ್ವಾಗತ.. ಕುಂದಾನಗರಿಯಲ್ಲಿ ಮೋದಿ ಭರ್ಜರಿ ರೋಡ್ ಶೋ