ಕರ್ನಾಟಕ

karnataka

ಮೈಸೂರು- ಬೆಂಗಳೂರು ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಪ್ರಧಾನಿ ಮೋದಿ

ETV Bharat / videos

ಮೈಸೂರು - ಬೆಂಗಳೂರು ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಪ್ರಧಾನಿ ಮೋದಿ - ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಪ್ರಧಾನಿ

By

Published : Mar 12, 2023, 2:20 PM IST

ಮಂಡ್ಯ:ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಮಂಡ್ಯದಲ್ಲಿ ನಡೆದ ರೋಡ್​ ಶೋ ಬಳಿಕ ಗೆಜ್ಜಲಗೆರೆಯಲ್ಲಿ ಹೆದ್ದಾರಿಗೆ ಚಾಲನೆ ನೀಡಲಾಯಿತು. ಸಕ್ಕರೆ ನಾಡಿಗೆ ಆಗಮಿಸಿದ ಪ್ರಧಾನಿಗೆ ಕಲಾ ತಂಡಗಳಿಂದ ಭವ್ಯ ಸ್ವಾಗತ ಕೋರಲಾಯಿತು. ಇದಕ್ಕೂ ಮುನ್ನ ಪ್ರಧಾನಿ ಭರ್ಜರಿ ರೋಡ್‌ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ ಸಾವಿರಾರು ಜನರು ಹೂಮಳೆ ಸುರಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್​ಪ್ರೆಸ್​ ಹೈವೇ ಕಾಮಗಾರಿ ಗ್ಯಾಲರಿ ವೀಕ್ಷಿಸಿದರು. ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಗಡ್ಕರಿ, ಜೋಶಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಮೈಸೂರಿಗೆ ಬಂದಿಳಿದ ಪ್ರಧಾನಿ ಮೋದಿ: ಮಂಡ್ಯದತ್ತ ಪ್ರಯಾಣ

ದಶಪಥ ಒಳಗೊಂಡಿರುವ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 118 ಕಿ.ಮೀ ಉದ್ದವಿದೆ. ಒಟ್ಟು 8,480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಹೆದ್ದಾರಿ ಮೂಲಕ ಬೆಂಗಳೂರು ಮತ್ತು ಮೈಸೂರಿನ ನಡುವಿನ ಸುಮಾರು 3 ಗಂಟೆಗಳ ಪ್ರಯಾಣವನ್ನು ಇನ್ನು ಮುಂದೆ 75 ನಿಮಿಷದಲ್ಲಿ ತಲುಪಬಹುದು. 

ಇದನ್ನೂ ಓದಿ:ಸಕ್ಕರೆ ನಾಡಲ್ಲಿ ಮೋದಿಗೆ ಅಕ್ಕರೆಯ ಸ್ವಾಗತ: ಭರ್ಜರಿ ರೋಡ್​​ ಶೋ, ಹೂವಿನ ಸುರಿಮಳೆ!- ವಿಡಿಯೋ

ABOUT THE AUTHOR

...view details