ದಶಾಶ್ವಮೇಧ ಘಾಟ್‌ನಲ್ಲಿ ತಾಯಿ ಹೀರಾಬೆನ್ ಪಿಂಡ ದಾನ ಮಾಡಿದ ಪ್ರಧಾನಿ ಮೋದಿ ಸಹೋದರ - ಪಿಂಡ ದಾನ
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಕಾಶಿಯ ಪ್ರಸಿದ್ಧ ದಶಾಶ್ವಮೇಧ ಘಾಟ್‌ನಲ್ಲಿ ತಮ್ಮ ತಾಯಿ ಹೀರಾಬೆನ್ ಮತ್ತು ಪೂರ್ವಜರ ಪಿಂಡ ದಾನ ಮಾಡಿದರು. ಪಂಕಜ್ ಮೋದಿ ಶುಕ್ರವಾರ ಸಂಜೆ ವಾರಣಾಸಿ ತಲುಪಿದ್ದರು. ಕಾಶಿಯ ಬ್ರಾಹ್ಮಣರ ಸಮ್ಮುಖದಲ್ಲಿ ಅವರು ಪಿಂಡದಾನ ಮಾಡಿದರು.
30 ಡಿಸೆಂಬರ್ 2022 ರಂದು ಪ್ರಧಾನಿಯವರ ತಾಯಿ ಹೀರಾಬೆನ್ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ದಶಾಶ್ವಮೇಧ ಘಾಟ್‌ನಲ್ಲಿ ಹೀರಾಬೆನ್ ಅವರ ಪಿಂಡದಾನ ಮಾಡಲು ಆಗಮಿಸಿದ ಪಂಕಜ್ ಮೋದಿಯ ಎಲ್ಲಾ ವಿಧಿವಿಧಾನಗಳನ್ನು ತೀರ್ಥಯಾತ್ರಾ ಅರ್ಚಕ ಪಂಡಿತ್ ರಾಜು ಝಾ ಅವರು ಪೂರ್ಣಗೊಳಿಸಿದರು. ಈ ವೇಳೆ ಪಂಕಜ್ ಮೋದಿ ಭಾವುಕರಾದರು. ತಾಯಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಗಂಗಾ ಮಾತೆಯನ್ನು ಪ್ರಾರ್ಥಿಸಿದರು.
ಪ್ರಧಾನಿ ಮೋದಿಯವರಿಗೆ ಐವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. "ದೇಶದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹಾಗೂ ಪೂರ್ವಜರ ಪಿಂಡ ದಾನವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಗಿದೆ" ಎಂದು ಪುರೋಹಿತ ರಾಜು ಝಾ ತಿಳಿಸಿದ್ದಾರೆ. ಕಾಶಿಯು ವಿಮೋಚನೆಗೊಂಡ ಪ್ರದೇಶವಾಗಿದೆ. ಇಲ್ಲಿನ ದಶಾಶ್ವಮೇಧ ಘಾಟ್ 84 ಘಾಟ್‌ಗಳಲ್ಲಿ ಮುಖ್ಯ ಘಾಟ್ ಆಗಿದೆ. ಇಲ್ಲಿ ಪಿಂಡ ದಾನ ಮಾಡುವುದರಿಂದ ಮಡಿದ ತಂದೆ-ತಾಯಿ ಮತ್ತು ಪೂರ್ವಜರು ಮೋಕ್ಷ ಪಡೆಯುತ್ತಾರೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: ಅಮ್ಮನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಪ್ರಧಾನಿ ಮೋದಿ: ಪಂಚಭೂತಗಳಲ್ಲಿ ಹೀರಾಬೆನ್ ಲೀನ