ಕರ್ನಾಟಕ

karnataka

ಸಿಡ್ನಿಯ ಹಾರ್ಬರ್ ಸೇತುವೆ, ಒಪೇರಾ ಹೌಸ್‌ಗೆ ಪ್ರಧಾನಿ ಮೋದಿ ಭೇಟಿ

ETV Bharat / videos

ಸಿಡ್ನಿಯ ಹಾರ್ಬರ್ ಸೇತುವೆ, ಒಪೇರಾ ಹೌಸ್‌ಗೆ ಪ್ರಧಾನಿ ಮೋದಿ ಭೇಟಿ.. ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್​ - ಪ್ರಧಾನಿ ಮೋದಿ ವಿದೇಶಿ ಪ್ರವಾಸ

By

Published : May 24, 2023, 6:08 PM IST

ಸಿಡ್ನಿ ( ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಬುಧವಾರ ರಾಜಧಾನಿ ಸಿಡ್ನಿಯ ಹಾರ್ಬರ್ ಸೇತುವೆ ಮತ್ತು ಒಪೇರಾ ಹೌಸ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಿಡ್ನಿ ಹಾರ್ಬರ್ ಮತ್ತು ಒಪೇರಾ ಹೌಸ್​ ಭಾರತದ ರಾಷ್ಟ್ರಧ್ವಜದ ತ್ರಿವರ್ಣಗಳಿಂದ ಕಂಗೊಳಿಸಿದವು.

ಇದನ್ನೂ ಮುನ್ನ ಮುಂಜಾನೆ ಅಡ್ಮಿರಾಲ್ಟಿ ಹೌಸ್‌ನಲ್ಲಿ ಪ್ರಧಾನಿ ಮೋದಿ ಗಾರ್ಡ್ ಆಫ್ ಆನರ್ ಗೌರವ ಸ್ವೀಕರಿಸಿದರು. ನಂತರದಲ್ಲಿ ಅಡ್ಮಿರಾಲ್ಟಿ ಹೌಸ್‌ನಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು. ಇದಾದ ಬಳಿಕ ಪಿಎಂ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಈಗಾಗಲೇ ಆಸ್ಟ್ರೇಲಿಯಾ - ಭಾರತ ನಡುವಿನ ಸಂಬಂಧವು ದೃಢವಾಗಿದೆ. ಈ ದ್ವಿಪಕ್ಷೀಯ ಸಭೆಯು ಇದರ ಸಾಮರ್ಥ್ಯವನ್ನು ಹೆಚ್ಚಸುತ್ತದೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವಕಾಶಗಳನ್ನೂ ರೂಪಿಸುವ ನಿರೀಕ್ಷೆ ಇದೆ. ಅಲ್ಲದೇ, ಉದ್ಯಮಿಗಳೊಂದಿಗೆ ನಡೆದ ದುಂಡು ಮೇಜಿನ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು.

ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ಮೋದಿ ಸೋಮವಾರ ಸಿಡ್ನಿಗೆ ಆಗಮಿಸಿದ್ದರು. ಒಟ್ಟು ಆರು ದಿನಗಳ ಪ್ರವಾಸ ಇಂದಿಗೆ ಮುಕ್ತಾಯವಾಗಿದ್ದು, ಸಿಡ್ನಿಯಿಂದ ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಆಸ್ಟ್ರೇಲಿಯದ ಜನರು, ಆಸ್ಟ್ರೇಲಿಯನ್ ಸರ್ಕಾರ ಮತ್ತು ನನ್ನ ಆತ್ಮೀಯ ಸ್ನೇಹಿತ ಪಿಎಂ ಆಂಥೋನಿ ಅಲ್ಬನೀಸ್ ಅವರ ಆತಿಥ್ಯಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನಾವು ಭಾರತ - ಆಸ್ಟ್ರೇಲಿಯಾ ಸ್ನೇಹಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಇದು ಜಾಗತಿಕ ಒಳಿತಿನ ಹಿತಾಸಕ್ತಿಯೂ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಆರಂಭವಾಗಲಿದೆ ಆಸ್ಟ್ರೇಲಿಯಾ ಕಾನ್ಸುಲೆಟ್

ABOUT THE AUTHOR

...view details