ಕರ್ನಾಟಕ

karnataka

ಚಿನ್ನ ದೋಚಲು ಕಳ್ಳರ ಗ್ಯಾಂಗ್​ ಪ್ಲಾನ್

ETV Bharat / videos

Watch video: ಗ್ಯಾಸ್ ಕಟ್ಟರ್​ ಮೂಲಕ ಚಿನ್ನ ದೋಚಲು ಪ್ಲಾನ್; ಅಂಗಡಿಯಲ್ಲಿ ಸಿಬ್ಬಂದಿ ಕಂಡು ಕಳ್ಳರ ಗ್ಯಾಂಗ್​ ಎಸ್ಕೇಪ್​ - ನಂದಗುಡಿ ಪೊಲೀಸರು

By

Published : Aug 3, 2023, 4:42 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ) : ಹೆದ್ದಾರಿ ಬದಿಯಲ್ಲಿದ್ದ ಚಿನ್ನದಂಗಡಿಗೆ ಬಂದ ಖದೀಮರು ಗ್ಯಾಸ್ ಕಟ್ಟರ್ ಮೂಲಕ ಚಿನ್ನ ದೋಚಲು ಹೋಗಿ ವಿಫಲವಾಗಿರುವ ಘಟನೆ ತಾವರೆಕೆರೆಯಲ್ಲಿ ನಡೆದಿದೆ. ಕಳ್ಳತನ ಯತ್ನ ವಿಫಲವಾಗಿ ಖದೀಮರು ಸ್ಥಳದಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಬುಧವಾರ ಮುಂಜಾನೆ ಹೊತ್ತಿಗೆ ಲಕ್ಷ್ಮೀ ಜುವೆಲರ್ಸ್​ಗೆ ದರೋಡೆ ಮಾಡಲು ಕಳ್ಳರ ಗ್ಯಾಂಗ್​ವೊಂದು ಬಂದಿತ್ತು. ಮೊದಲಿಗೆ ಅಂಗಡಿ ಮುಂದಿನ ಬಲ್ಬ ಕಿತ್ತು ಹಾಕಿ ಕಳ್ಳತನಕ್ಕೆ ತಯಾರಿ ನಡೆಸಿದ ಖದೀಮರು ನಂತರ ಗ್ಯಾಸ್ ಕಟ್ಟರ್​ನಿಂದ ಅಂಗಡಿ ಶೆಟರ್ ಕಟ್ ಮಾಡಲು ಯತ್ನ ಮಾಡಿದ್ದಾರೆ. ಆದರೇ ಈ ವೇಳೆ ಅಂಗಡಿ ಒಳಗಿಂದ ಸಿಬ್ಬಂದಿ ಕಿರುಚಾಡಿದ ಹಿನ್ನೆಲೆ ಕಳ್ಳತನಕ್ಕೆ ತಂದಿದ್ದ ಗ್ಯಾಸ್ ಕಟರ್, ರಾಡ್​ಗಳ ಸಮೇತ ಖದೀಮರು ಎಸ್ಕೇಪ್​ ಆಗಿದ್ದಾರೆ. ಈ ಕಳ್ಳತನ ಯತ್ನದಿಂದ ಅಂಗಡಿ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.     

ಇದನ್ನೂ ಓದಿ :ಚಂದ್ರಗುತ್ತಿ ರೇಣುಕಾಂಬ ದೇವಾಲಯಕ್ಕೆ ನುಗ್ಗಿದ ಕಿಡಿಗೇಡಿಗಳು.. ಕಳ್ಳತನಕ್ಕೆ ಯತ್ನ

ABOUT THE AUTHOR

...view details