ಕರ್ನಾಟಕ

karnataka

ಪಿಥೋರ್​ಗಢ ಭೂಕುಸಿತ : ಗುಡ್ಡ ಕುಸಿಯುತ್ತಿರುವ ಭಯಾನಕ ದೃಶ್ಯ ಸೆರೆ

ETV Bharat / videos

ಪಿಥೋರ್​ಗಢ ಭೂಕುಸಿತ: ಗುಡ್ಡ ಕುಸಿಯುತ್ತಿರುವ ಭಯಾನಕ ದೃಶ್ಯ ಸೆರೆ - ಕುಮಾಂವ್​ ರಸ್ತೆ ಮಾರ್ಗದಲ್ಲಿ ನಿರಂತರವಾಗಿ ಭೂಕುಸಿತ

By ETV Bharat Karnataka Team

Published : Oct 19, 2023, 2:10 PM IST

ಪಿಥೋರ್​ಗಢ ( ಉತ್ತರಾಖಂಡ್): ಇಲ್ಲಿನ ಆದಿ ಕೈಲಾಸ್​ಗೆ ತೆರಳುವ ಕುಮಾಂವ್​ ರಸ್ತೆ ಮಾರ್ಗದಲ್ಲಿ ನಿರಂತರವಾಗಿ ಭೂಕುಸಿತ ಉಂಟಾಗುತ್ತಿದೆ. ಈಗಾಗಲೇ ಇಲ್ಲಿ ಉಂಟಾಗಿರುವ ಭೂ ಕುಸಿತದಿಂದಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಪಿಥೋರ್​ಗಢ ಜಿಲ್ಲೆಯ ದಾರ್ಚುಲಾದಿಂದ ಲಿಪುಲೇಖ್​ಗೆ ತೆರಳುವ ರಸ್ತೆ ಮಾರ್ಗದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಇಡೀ ಗುಡ್ಡವೇ ಭಾಗಶಃ ಕುಸಿದು ಬಿದ್ದಿದೆ. ಗುಡ್ಡ ಕುಸಿಯುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಕೂಡಲೇ ವಾಹನಗಳನ್ನು ತಡೆ ಹಿಡಿದಿದ್ದಾರೆ. ಈ ರಸ್ತೆ ಮಾರ್ಗದಲ್ಲಿ ಇಂತಹ ಒಟ್ಟು ಆರಕ್ಕೂ ಅಧಿಕ ಸ್ಥಳಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಇಲ್ಲಿನ ಆದಿ ಕೈಲಾಸ ಮತ್ತು ಮಾನಸ ಸರೋವರಕ್ಕೆ ತೆರಳಲು ಅಗಲವಾದ ರಸ್ತೆ ನಿರ್ಮಾಣ ಮಾಡುತ್ತಿದೆ. ಇದರಿಂದ ಯಾತ್ರಾರ್ಥಿಗಳ ಸುಲಭವಾಗಿ ಪುಣ್ಯ ಕ್ಷೇತ್ರಗಳಿಗೆ ತೆರಳಬಹುದು. ಇದು ಮಾತ್ರವಲ್ಲದೇ ಸೇನಾಪಡೆಗಳ ವಾಹನಗಳೂ ಭಾರತ ಮತ್ತು ಚೀನಾ ಗಡಿಗೆ ತೆರಳಲು ಇದೇ ಮಾರ್ಗವನ್ನು ಬಳಕೆ ಮಾಡುತ್ತಾರೆ. ಆದರೆ, ಭೂ ಕುಸಿತ ಸಮಸ್ಯೆಗಳು ಆಗಾಗ್ಗೇ ಎದುರಾಗುತ್ತಲೇ ಇದೆ. ಈ ಲಿಪುಲೇಖ್ ರಸ್ತೆಯ ಅಗಲೀಕರಣ ಕಾಮಗಾರಿಯೂ ಭರದಿಂದ ಸಾಗಿದೆ. ಈ ರಸ್ತೆಯನ್ನು ಗುಡ್ಡಗಳನ್ನು ಕೊರೆಯುವ ಮೂಲಕ ನಿರ್ಮಾಣ ಮಾಡಲಾಗಿದ್ದು, ಚೀನಾ, ಟಿಬೆಟ್​​, ನೇಪಾಳ ಗಡಿಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಇದನ್ನೂ ಓದಿ :ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ: ಪ್ರಯಾಣಿಕರಿಗೆ ಗಾಯ

ABOUT THE AUTHOR

...view details