ಪಿಟ್‌ಬುಲ್ ಶ್ವಾನ ದಾಳಿ.. ಬಾಲಕನ ಮುಖ ಮತ್ತು ಕಿವಿ ಭಾಗಕ್ಕೆ 150ಕ್ಕೂ ಹೆಚ್ಚು ಹೊಲಿಗೆ - ಈಟಿವಿ ಭಾರತ ಕನ್ನಡ
ಗಾಜಿಯಾಬಾದ್ ( ನವದೆಹಲಿ): ಪಾರ್ಕ್ನಲ್ಲಿ ಆಟ ಆಡುತ್ತಿದ್ದ 10 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ ನಡೆಸಿರುವ ಘಟನೆ ಇಲ್ಲಿನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಯ್ ನಗರದಲ್ಲಿ ನಡೆದಿದೆ. ನಾಯಿ ದಾಳಿಗೆ ಬಾಲಕನ ಮುಖ ಮತ್ತು ಕಿವಿ ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು, 150ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ನಾಯಿ ದಾಳಿ ನಡೆಸುವ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಪಾರ್ಕ್ ಒಂದರಲ್ಲಿ ಹುಡುಗಿಯೊಬ್ಬಳು ತನ್ನ ಪಿಟ್‌ಬುಲ್ ನಾಯಿಯೊಂದಿಗೆ ವಾಯುವಿಹಾರಕ್ಕೆ ಬಂದಿದ್ದಳು. ಈ ವೇಳೆ, ಆಕೆಯ ನಾಯಿ ಪಾರ್ಕ್ನಲ್ಲಿ ಆಟ ಆಡುತ್ತಿದ್ದ ಪುಷ್ಪ್ ತ್ಯಾಗಿ (10) ಮೇಲೆ ದಾಳಿ ನಡೆಸಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಬಗ್ಗೆ ನಗರಸಭೆಯೂ ಕ್ರಮ ಕೈಗೊಂಡಿದೆ. ಜೊತೆಗೆ ನಾಯಿಯ ಮಾಲೀಕರಿಗೆ 5000 ದಂಡ ವಿಧಿಸಲಾಗಿದೆ.
Last Updated : Feb 3, 2023, 8:27 PM IST