ಅಮರನಾಥ ಯಾತ್ರೆ: ಗುಹೆಯಿಂದ ಹಿಂದಿರುಗುವಾಗ 300 ಅಡಿ ಕೆಳಗೆ ಜಾರಿ ಬಿದ್ದು ಯಾತ್ರಿಕ ಸಾವು
ಜಮ್ಮು ಮತ್ತು ಕಾಶ್ಮೀರ: ಪವಿತ್ರ ಅಮರನಾಥ ಗುಹೆಯಿಂದ ಹಿಂತಿರುಗುತ್ತಿದ್ದಾಗ ಕಾಳಿಮಾತಾ ಬಳಿ ವ್ಯಕ್ತಿಯೊಬ್ಬ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ತುಂಬಾ ಗ್ರಾಮದ ನಿವಾಸಿ ವಿಜಯ್ ಕುಮಾರ್ ಶಾ (50) ಎಂಬ ಯಾತ್ರಿಕ ಗುಹೆಯಿಂದ ಹಿಂತಿರುಗುತ್ತಿದ್ದಾಗ ಕಾಳಿಮಾತಾ ಬಳಿ ಜಾರಿ 300 ಅಡಿ ಕೆಳಗೆ ಬಿದ್ದಿದ್ದರು. ಬಿದ್ದಿರುವ ಯಾತ್ರಿಕನನ್ನು ಮೌಂಟೇನ್ ಪಾರುಗಾಣಿಕಾ ತಂಡ ಮತ್ತು ಸೇನೆಯು ಜಂಟಿಯಾಗಿ ಕಾರ್ಯಚರಣೆ ನಡೆಸಿ ರಕ್ಷಿಸಲಾಯಿತು. ಆದರೆ ರಕ್ಷಿಸಲಾದ ವಿಜಯ್ ಕುಮಾರ್ ಶಾ ಬಳಿಕ ಸಾವನ್ನಪ್ಪಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ಈ ತಿಂಗಳ ಪ್ರಾರಂಭದ ವರದಿ ಪ್ರಕಾರ, 31 ದಿನದ ಪವಿತ್ರ ಅಮರನಾಥ ಯಾತ್ರೆಯಲ್ಲಿ ಸುಮಾರು 4 ಲಕ್ಷ ಜನರು ಶಿವಲಿಂಗ ದರ್ಶನ ಪಡೆದಿದ್ದು, ಆಗಸ್ಟ್ 1ರಂದು ಮತ್ತು 6 ಸಾವಿರ ಜನರು ದರ್ಶನಕ್ಕೆ ಹೊರಟಿದ್ದರು. ಅಮರನಾಥ ಪವಿತ್ರ ಯಾತ್ರೆ ಜುಲೈ 1 ರಿಂದ ಆರಂಭವಾಗಿದ್ದು, 3.97 ಲಕ್ಷ ಭಕ್ತರು ಪವಿತ್ರ ಗುಹೆಯಲ್ಲಿ ಶಿವಲಿಂಗದ ದರ್ಶನ ಪಡೆದಿದ್ದಾರೆ. ಈ ಯಾತ್ರೆಯಲ್ಲಿ ಇದುವರೆಗೆ ನಾನಾ ಕಾರಣಗಳಿಂದ 37 ಯಾತ್ರಿಕರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಕುಟುಂಬಸ್ಥರೊಂದಿಗೆ ಅಮರನಾಥನ ದರ್ಶನ ಪಡೆದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್