ಚಲಿಸುತ್ತಿದ್ದ ರೈಲಿನಲ್ಲಿ ಶೂಟೌಟ್: ಮೊಬೈಲ್ ಕಳ್ಳತನಕ್ಕಾಗಿ ಗುಂಡು ಹಾರಿಸಿದ ಆರೋಪಿಗಳು - ETV Bharath Kannada news
ಖಗಾರಿಯಾ (ಬಿಹಾರ):ಚಲಿಸುತ್ತಿರುವ ರೈಲಿನಲ್ಲಿ ಯುವಕನೊಬ್ಬನ ಕೈಯಿಂದ ನಾಲ್ವರು ಫೋನ್ ಕಿತ್ತುಕೊಂಡು, ಆತನ ಮೇಲೆ ಗುಂಡು ಹಾರಿಸಿದ ಘಟನೆ ಬಿಹಾರದ ಇಮ್ಲಿ ನಿಲ್ದಾಣದಲ್ಲಿ ನಡೆದಿದೆ. ಗಾಯಗೊಂಡ ನಯನ್ ಕುಮಾರ್ ಅವರನ್ನು ಖಗಾರಿಯಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲಿನಲ್ಲಿದ್ದ ಸಹ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ನಯನ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಯನ್ ಕುಮಾರ್ ಸಮಸ್ತಿಪುರ ಜಿಲ್ಲೆಯ ಫತೇಪುರ್ ಗ್ರಾಮದವರಾಗಿದ್ದು, ಕಿಶನ್‌ಗಂಜ್‌ಗೆ ಪ್ರಯಾಣ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಯನ್ ಕುಮಾರ್ ಆರೋಗ್ಯ ಸುಧಾರಿಸಿದ್ದು, ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಘಟನೆ ಬಕ್ರಿ ಮತ್ತು ಸಲೋನಾ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಆಗಿದೆ. ನಯನ್ ಕುಮಾರ್ ಜೊತೆಗೆ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸುತ್ತಿದ್ದ ಅವರು ಇಮ್ಲಿ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಶೂಟ್ ಮಾಡಿದ್ದಾರೆ. ನಂತರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಆಸ್ಪತ್ರೆಯಲ್ಲಿರುವ ನಯನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗ್ಯಾಸ್ ಟ್ಯಾಂಕರ್ - ಟ್ರಕ್ ಡಿಕ್ಕಿ: ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ.. ನಾಲ್ವರು ಸಜೀವ ದಹನ