ಭಾಷಣದ ವೇಳೆ ಪಿಒಕೆಗೆ ಜನರ ಬೇಡಿಕೆ: 'ತಾಳ್ಮೆಯಿಂದಿರಿ' ಎಂದ ರಾಜನಾಥ್ ಸಿಂಗ್ - ಪಾಕಿಸ್ತಾನ ಆಕ್ರಮಿತ ಕಾಶ್ಮೀರ
ಜೈಸಿಂಗ್‌ಪುರ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನವೆಂಬರ್ 12 ರಂದು ಮತದಾನ ನಡೆಯಲಿದೆ. ರಾಜಕೀಯ ನಾಯಕರ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಬಿಜೆಪಿಯ ಸ್ಟಾರ್ ಪ್ರಚಾರಕ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿನ್ನೆ ಜೈಸಿಂಗ್‌ಪುರ, ಕಾಂಗ್ರಾದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ಯನ್ನು ಮರಳಿ ಪಡೆಯುವ ಬೇಡಿಕೆಯ ಕುರಿತು ಸಾರ್ವಜನಿಕರು ಜೋರು ಧ್ವನಿ ಎತ್ತಿದರು. ಇದಕ್ಕೆ ಮುಗುಳ್ನಕ್ಕ ಸಚಿವರು, ತಾಳ್ಮೆಯಿಂದಿರಿ ಎಂದರು. ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಹಿಮಾಚಲವು ಮಹತ್ವದ ಕೊಡುಗೆ ನೀಡಿದೆ. ಭಾರತೀಯ ಜನತಾ ಪಕ್ಷ ಹೇಳಿದ್ದನ್ನೇ ಮಾಡುತ್ತದೆ. ಪಕ್ಷವು ಪ್ರಣಾಳಿಕೆ ಸಿದ್ಧಪಡಿಸುವಾಗ ಈಡೇರಿಸಲಾಗದ ಭರವಸೆಗಳನ್ನು ನೀಡುವುದಿಲ್ಲ ಎಂದು ಹೇಳಿದರು.
Last Updated : Feb 3, 2023, 8:31 PM IST