ಗ್ರಾಮ ಪಂಚಾಯತಿ ಕೇಂದ್ರಸ್ಥಾನಕ್ಕೆ ಆಗ್ರಹ; ಎತ್ತಿನಬಂಡಿಗಳ ಸಮೇತ ಅಹೋರಾತ್ರಿ ಧರಣಿ - ಚುನಾವಣೆಗಳನ್ನ ಬಹಿಷ್ಕಾರ
ಗದಗ : ಗ್ರಾಮ ಪಂಚಾಯತಿ ಕೇಂದ್ರಸ್ಥಾನ ಬೇಕು ಎಂದು ಜಗಳೂರು ಗ್ರಾಮಸ್ಥರು ಜಿಲ್ಲೆಯ ರೋಣ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಎತ್ತಿನಬಂಡಿ ಸಮೇತ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮಂಗಳವಾರ ಆರಂಭಗೊಂಡ ಧರಣಿ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾಕಾರರು ಅಧಿಕಾರಿಗಳ ಮನವೊಲಿಕೆಗೆ ಜಗ್ಗುತ್ತಿಲ್ಲ. ತಹಶೀಲ್ದಾರ್ ಕಚೇರಿ ಎತ್ತಿನಬಂಡಿಗಳಿಂದ ಭರ್ತಿಯಾಗಿದೆ.
ಜಗಳೂರು ಗ್ರಾಮಕ್ಕೆ ಗ್ರಾಮ ಪಂಚಾಯತ್ ಕೇಂದ್ರಸ್ಥಾನ ಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. "ರೋಣ ಪಟ್ಟಣದಿಂದ ಕೇವಲ 6 ಕಿ.ಮೀ ಇದ್ದರೂ ಜನಸಂಖ್ಯೆಯಲ್ಲಿ ಹೊಸಳ್ಳಿ ಗ್ರಾಮಕ್ಕಿಂತ ನಮ್ಮೂರಿನ (ಜಗಳೂರು) ಜನಸಂಖ್ಯೆಯೇ ಹೆಚ್ಚಿದೆ. ಹೊಸಳ್ಳಿ ನಮ್ಮೂರಿಗಿಂತ ಚಿಕ್ಕದಿದ್ದರೂ ಅಲ್ಲಿ ಪಂಚಾಯತಿ ಕೇಂದ್ರ ಸ್ಥಾಪನೆ ಮಾಡಿ ನಮಗೆ ಅನ್ಯಾಯ ಮಾಡಿದ್ದಾರೆ. ನಮಗೆ ಗ್ರಾಮ ಪಂಚಾಯತಿ ಕೇಂದ್ರಸ್ಥಾನ ಬೇಕು ಅಂತ ಹಲವು ಬಾರಿ ಮನವಿ ಕೊಡಲಾಗಿತ್ತು. ಈ ಹಿಂದೆ ಹಲವು ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಕ್ಕೂ ಪ್ರಯತ್ನ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸುಳ್ಳು ಭರವಸೆಗಳು ನಮ್ಮನ್ನು ಕೈಕಟ್ಟಿ ಕೂರುವಂತೆ ಮಾಡಿದವು. ಈಗ ಆ ಎಲ್ಲ ಭರವಸೆಗಳನ್ನು ನಂಬದೆ ಕೇಂದ್ರಸ್ಥಾನ ಪಡೆದೇ ಊರಿಗೆ ಹೋಗೋದು" ಎಂದು ಜನರು ಟೆಂಟ್ ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral video: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪವಾಡ ಸದೃಶ್ಯ ರೀತಿ ಮಹಿಳೆ ಪಾರು