ಕರ್ನಾಟಕ

karnataka

ಫಿಜಿಯಲ್ಲಿ ಮೊಳಗಿದ "ಭಾರತ್ ಮಾತಾ ಕಿ ಜೈ"

ETV Bharat / videos

Video ನೋಡಿ.. ಫಿಜಿಯಲ್ಲಿ ಮೊಳಗಿದ "ಭಾರತ್ ಮಾತಾ ಕಿ ಜೈ" ಘೋಷಣೆ - ETV Bharath Kannada news

By

Published : Feb 17, 2023, 8:11 AM IST

ಸುವಾ (ಫಿಜಿ):ವಿಶ್ವ ಹಿಂದಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ "ಭಾರತ್ ಮಾತಾ ಕಿ ಜೈ" ಘೋಷಣೆಗಳು ಪ್ರತಿಧ್ವನಿಸಿತು. ಫಿಜಿಯ ಉಪ ಪ್ರಧಾನಿ ಬಿಮನ್ ಪ್ರಸಾದ್ ಅವರು ಆರ್ಥಿಕ ಮತ್ತು ರಾಜಕೀಯದ ವಿಷಯದಲ್ಲಿ ಭಾರತವು ವಿಶ್ವ ನಾಯಕ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ದೊಡ್ಡ ನಾಯಕ ಎಂದು ಬಣ್ಣಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಪ್ರೇಕ್ಷಕರಿಂದ "ಭಾರತ್ ಮಾತಾ ಕಿ ಜೈ" ಎಂಬ ಘೋಷಣೆ ಮೊಳಗಿತು. 

ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ನಾಯಕತ್ವದಲ್ಲಿ ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಭಾರತವು ಆರ್ಥಿಕತೆ, ರಾಜಕೀಯ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ದೊಡ್ಡ ನಾಯಕತ್ವದಲ್ಲಿ ವಿಶ್ವ ನಾಯಕರಲ್ಲಿ ಒಂದಾಗಿದೆ. ಫಿಜಿಯಲ್ಲಿ ಹಿಂದಿ ಭಾಷೆಯ ಪ್ರಚಾರ ಮತ್ತು ಪ್ರಸರಣವು ಕಳೆದ 140 ವರ್ಷಗಳಿಂದ ನಡೆಯುತ್ತಿದೆ. ಭಾರತದಿಂದ ಇಲ್ಲಿಗೆ ರಾಮಾಯಣ ಮತ್ತು ಗೀತೆಯನ್ನು ಮಾತ್ರ ಅಲ್ಲ, ಅಲ್ಲಿನ ಸಂಸ್ಕೃತಿಯನ್ನು ತರಲಾಗಿದೆ ಎಂದು ಬಿಮನ್ ಪ್ರಸಾದ್ ಹೇಳಿದರು. 

ಫಿಜಿಯಲ್ಲಿ ನಡೆಯುತ್ತಿರುವ ವಿಶ್ವ ಹಿಂದಿ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಈ ಸಮ್ಮೇಳನವು ಹಿಂದಿಯ ಮಹಾಕುಂಭವಾಗಲಿದ್ದು, ಪ್ರಪಂಚದಾದ್ಯಂತದ ಜನರು ಭಾಗವಿಹಿಸಿದ್ದಾರೆ. ಇದು ಹಿಂದಿ ವಿಷಯದಲ್ಲಿ ಜಾಗತಿಕ ನೆಟ್‌ವರ್ಕಿಂಗ್ ವೇದಿಕೆಗೆ ವೇದಿಕೆಯಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. 

ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯ ಕಾಯ್ದೆಗಳಿಗೆ ಮಹತ್ವದ ಬದಲಾವಣೆ: ಅಮಿತ್ ಶಾ

ABOUT THE AUTHOR

...view details